ಐಪಿಎಲ್ – ಸಿಎಸ್‌ಕೆ ತಂಡದ ಓರ್ವ ಬೌಲರ್ ಮತ್ತು 12 ಮಂದಿ ಸಿಬ್ಬಂದಿಗೆ ಕೊರೋನಾ!

0
200
Tap to know MORE!

ಕೊರೋನಾ ಭೀತಿಯಿಂದಾಗಿ ಎದುರಾದ ಭಾರೀ ಅಡೆತಡೆಗಳನ್ನು ದಾಟಿ ಕಡೆಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡೆಸಲು ಅನುಮತಿ ಸಿಕ್ಕಿದೆ. ಆದರೆ ಪಂದ್ಯಾವಳಿಯ ಆರಂಭಕ್ಕೂ ಮುನ್ನವೇ ಭಾರಿ ಹೊಡೆತ ಬಿದ್ದಿದೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಒಬ್ಬ ಬೌಲರ್ ಮತ್ತು 10-12 ಬೆಂಬಲ ಸಿಬ್ಬಂದಿಗಳು ಕರೋನವೈರಸ್‌ಗೆ ತುತ್ತಾಗಿರುವ ಬಗ್ಗೆ ವರದಿಯಾಗಿದೆ.

ಸೂಪರ್ ಕಿಂಗ್ಸ್ ಆಗಸ್ಟ್ 21 ರಂದು ದುಬೈಗೆ ತಲುಪಿದ್ದು, ಶುಕ್ರವಾರ (ಇಂದು) ತರಬೇತಿಯನ್ನು ಪ್ರಾರಂಭಿಸುವ ನಿರೀಕ್ಷೆಯಲ್ಲಿತ್ತು.

ವರದಿಗಳ ಪ್ರಕಾರ, ಈ ಬೆಳವಣಿಗೆಯ ಪರಿಣಾಮ, ಎಂಎಸ್ ಧೋನಿ ನೇತೃತ್ವದ ತಂಡಕ್ಕೆ ಕ್ವಾರಂಟೈನ್ ಅವಧಿಯನ್ನು ವಿಸ್ತರಿಸಲಾಗಿದೆ.

ಬಿಸಿಸಿಐನ ಕೋವಿಡ್ -19 ಪ್ರೋಟೋಕಾಲ್ಗಳ ಪ್ರಕಾರ, ಯುಎಇಗೆ ಇಳಿದ ನಂತರ ಎಲ್ಲಾ ತಂಡಗಳು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಮತ್ತು ನಂತರ 1, 3 ಮತ್ತು 5 ದಿನಗಳ ಅಂತರದಲ್ಲಿ ಮೂರು ಬಾರಿ ಪರೀಕ್ಷೆಗೆ ಒಳಗಾಗಬೇಕಾಗಿದೆ. ತಂಡವು ಹೋಟೆಲ್ನಲ್ಲಿ ಕಡ್ಡಾಯವಾಗಿ ಆರು ದಿನಗಳ ಕ್ಯಾರೆಂಟೈನ್‌ನಲ್ಲಿರಬೇಕಾಗುತ್ತದೆ.

ಎಲ್ಲರ ಪರೀಕ್ಷಾ ಫಲಿತಾಂಶಗಳು “ನೆಗೆಟಿವ್” ಬಂದ ಬಳಿಕವಷ್ಟೇ, ತಂಡಗಳಿಗೆ ತರಬೇತಿ ಪ್ರಾರಂಭಿಸಲು ಅವಕಾಶವಿರುತ್ತದೆ.

ಇತರ ತಂಡಗಳು ಈಗಾಗಲೇ ತರಬೇತಿಯನ್ನು ಪ್ರಾರಂಭಿಸಿವೆ. ಆದರೆ ಯುಎಇಗೆ ತೆರಳುವ ಮೊದಲು ಸಿಎಸ್‌ಕೆ ತಂಡ, ಚೆನ್ನೈನಲ್ಲಿ ಭಾರತೀಯ ಆಟಗಾರರಿಗೆ ಕಿರು ತರಬೇತಿ ಶಿಬಿರವನ್ನು ನಡೆಸಿತ್ತು.

LEAVE A REPLY

Please enter your comment!
Please enter your name here