ಐಪಿಎಲ್ ೨೦೨೦ನ್ನು ಶ್ರೀಲಂಕಾದಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ

0
161
Tap to know MORE!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೇವಲ ಮನರಂಜನೆಯಲ್ಲ. ಆದರೆ ಕ್ರಿಕೆಟ್‌ನ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಅಂಶವಾಗಿದೆ. ಹಾಗಾಗಿ, ಬಿಸಿಸಿಐ ಟಿ-20 ಲೀಗ್‌ನ 13 ನೇ ಆವೃತ್ತಿಯನ್ನು ಆಯೋಜಿಸುವ ಬಗ್ಗೆ ಆಯ್ಕೆಗಳನ್ನು ಅನ್ವೇಷಿಸುತ್ತಿದೆ ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.

ಕರೋನವೈರಸ್ ಸಾಂಕ್ರಾಮಿಕ ರೋಗದ ಭೀತಿಯಿಂದ ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಐಪಿಎಲ್ 2020 ಮುಂದಿನ ಸೂಚನೆ ಬರುವವರೆಗೂ ಮುಂದೂಡಿತ್ತು.

ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ಯೋಜನೆ ರೂಪಿಸಲು ಮತ್ತು ಪಂದ್ಯಗಳು ಮತ್ತು ಆದಾಯದ ನಷ್ಟವನ್ನು ಸರಿದೂಗಿಸಲು ಪ್ರಯತ್ನಿಸಲು ಐಸಿಸಿ ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ ಎಂದರು.

ಶನಿವಾರ, ಸಲಾಮ್ ಕ್ರಿಕೆಟ್ 2020 ರಲ್ಲಿ ಮಾತನಾಡಿದ ಸುನೀಲ್ ಗವಾಸ್ಕರ್, ಭಾರತದಲ್ಲಿ ಕೋವಿಡ್ -19 ಪರಿಸ್ಥಿತಿ ಸೆಪ್ಟೆಂಬರ್ ವೇಳೆಗೆ ಹಿಡಿತಕ್ಕೆ ಬರದಿದ್ದರೆ, ಐಪಿಎಲ್ 2020 ಅನ್ನು ವಿದೇಶದಲ್ಲಿ ನಡೆಸಬಹುದು. ಮೇಲಾಗಿ ಶ್ರೀಲಂಕಾ ಅಥವಾ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಉತ್ತಮ ಆಯ್ಕೆಯಾಗಲಿದೆ ಎಂದರು.

ಐಪಿಎಲ್ 2020 ಕ್ಕೆ ಭಾರತವೇ ಮೊದಲ ಆಯ್ಕೆಯ ಆತಿಥೇಯ ರಾಷ್ಟ್ರವಾದರೂ, ಶ್ರೀಲಂಕಾದಲ್ಲಿ ಪಂದ್ಯಾವಳಿಯನ್ನು ಆಯೋಜಿಸುವುದು ಕಾರ್ಯಸಾಧ್ಯವಾದ ಆಯ್ಕೆಯಾಗಿದೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಸಮರ್ಥಿಸಿಕೊಂಡರು. ಶ್ರೀಲಂಕಾ ಕ್ರಿಕೆಟ್, ಏಪ್ರಿಲ್ ಆರಂಭದಲ್ಲಿಯೇ, ದ್ವೀಪ ರಾಷ್ಟ್ರದಲ್ಲಿ ಐಪಿಎಲ್ ಆತಿಥ್ಯ ವಹಿಸಲು ಮುಂದಾಗಿತ್ತು, ಬಿಸಿಸಿಐ ಅವರು ಈ ಕ್ರಮವನ್ನು ಪರಿಗಣಿಸಿದರೆ ಆದಾಯ ನಷ್ಟವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಹೇಳಿದ್ದರು.

LEAVE A REPLY

Please enter your comment!
Please enter your name here