ಇಂದಿನಿಂದ ಐಪಿಎಲ್ 2020 ಆರಂಭ – ಪಂದ್ಯವನ್ನು ಎಲ್ಲಿ ಲೈವ್ ವೀಕ್ಷಿಸಬಹುದು?

0
220
Tap to know MORE!

ನವದೆಹಲಿ ಸೆ.19: ಕೊರೋನಾ ಭೀತಿಯ ನಡುವೆಯೂ, ಇಂದಿನಿಂದ ಐಪಿಎಲ್ 2020 ಆರಂಭಗೊಳ್ಳಲಿದೆ. ಅಬುಧಾಬಿಯಲ್ಲಿ ನಡೆಯಲಿರುವ ಟೂರ್ನಮೆಂಟ್ ಓಪನರ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.

ಕೊರೋನವೈರಸ್ ಸಾಂಕ್ರಾಮಿಕ ರೋಗದ ಭೀತಿಯಿಂದಾಗಿ ಮಾರ್ಚ್ 25 ರಿಂದ ದೇಶದಲ್ಲಿ ಲಾಕ್ ಡೌನ್ ಹೇರಿದ ಪರಿಣಾಮ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಐಪಿಎಲ್ 2020 ಅನ್ನು ಅನಿರ್ದಿಷ್ಟವಾಗಿ ಮುಂದೂಡಲು ಒತ್ತಾಯಿಸಿತು.

ಡ್ರೀಮ್ 11 ಐಪಿಎಲ್ 2020 ವೇಳಾಪಟ್ಟಿ ಇಲ್ಲಿದೆ ನೋಡಿ

ಐಪಿಎಲ್ ರದ್ದತಿಯಿಂದಾಗಿ ಅಂದಾಜು 534 ಮಿಲಿಯನ್ ಡಾಲರ್ ಆದಾಯ ನಷ್ಟವಾಗಬಹುದು ಎಂಬ ಲೆಕ್ಕಾಚಾರದಿಂದ, ಪಂದ್ಯಾವಳಿಯನ್ನು ಭಾರತದಿಂದ ಹೊರಗೆ ಆಯೋಜಿಸಲು ನಿರ್ಧರಿಸಲಾಯಿತು. ಭಾರತವು ಕೊರೋನಾ ರೋಗದಿಂದ, ವಿಶ್ವದ ಎರಡನೇ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದ್ದು, 50 ಲಕ್ಷಕ್ಕೂ ಹೆಚ್ಚಿನ ಸೋಂಕಿತರ ವರದಿಯಾಗಿದೆ.

ಸಾಂಕ್ರಾಮಿಕ ರೋಗದಿಂದಾಗಿ ಆಸ್ಟ್ರೇಲಿಯಾದಲ್ಲಿ ನಡೆಬೇಕಿದ್ದ ಟಿ 20 ವಿಶ್ವಕಪ್ 2020 ಅನ್ನು ಮುಂದೂಡಿರುವುದು ಸಹ ಐಪಿಎಲ್ ಆಯೋಜನೆಗೆ ನೆರವಾಯಿತು. ಪಂದ್ಯಗಳು ದುಬೈ, ಶಾರ್ಜಾ ಮತ್ತು ಅಬುಧಾಬಿಯ ಖಾಲಿ ಸ್ಟೇಡಿಯಂನಲ್ಲಿ, ಎಲ್ಲಾ ಸುರಕ್ಷತೆಯನ್ನು ಪಾಲಿಸಿ ನಡೆಯಲಿವೆ.

ಐಪಿಎಲ್ 2020: ನಿಮಗೆ ತಿಳಿದಿರಬೇಕಾದ ಮಾಹಿತಿಗಳು

ಐಪಿಎಲ್ 2020 ಯಾವಾಗ ಪ್ರಾರಂಭವಾಗುತ್ತದೆ?
ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್ 2020) 13 ನೇ ಆವೃತ್ತಿಯು ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯವು ನವೆಂಬರ್ 10 ರಂದು ನಡೆಯಲಿದೆ.

ಐಪಿಎಲ್ 2020 ರಲ್ಲಿ ಪಂದ್ಯಗಳು ಯಾವ ಸಮಯದಲ್ಲಿ ಪ್ರಾರಂಭವಾಗುತ್ತವೆ?

ದಿನದ ಮೊದಲ ಪಂದ್ಯ : 3:30 PM (ಭಾರತೀಯ ಕಾಲಮಾನ) ಮತ್ತು 2:00 PM (ಯುಎಇ ಸಮಯ)
ದಿನದ ಎರಡನೇ ಪಂದ್ಯ :7:30 PM (ಭಾರತೀಯ ಕಾಲಮಾನ) ಮತ್ತು 6:00 PM (ಯುಎಇ ಸಮಯ)

ಕೇವಲ 10 ದಿನ ಎರಡು ಪಂದ್ಯಗಳು ನಡೆಯಲಿದ್ದು, ಬೇರೆಲ್ಲಾ ದಿನಗಳಲ್ಲಿ ದಿನಕ್ಕೊಂದು ಪಂದ್ಯ (7.30 PM) ನಡೆಯಲಿದೆ.

ಟಿವಿಯಲ್ಲಿ ಐಪಿಎಲ್ 2020 ಪಂದ್ಯಗಳನ್ನು ನಾನು ಎಲ್ಲಿ ವೀಕ್ಷಿಸಬಹುದು?

ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಚಾನೆಲ್ಗಳು ಪಂದ್ಯಗಳನ್ನು ಭಾರತದಲ್ಲಿ ನೇರ ಪ್ರಸಾರ ಮಾಡಲಿದೆ.

ಐಪಿಎಲ್ 2020 ಪಂದ್ಯಗಳನ್ನು ಆನ್‌ಲೈನ್‌ನಲ್ಲಿ ನೇರಪ್ರಸಾರ ವೀಕ್ಷಿಸುವುದು ಹೇಗೆ?

ಡಿಸ್ನಿ + ಹಾಟ್‌ಸ್ಟಾರ್ ವಿಐಪಿ – ಐಪಿಎಲ್ 2020 ರಲ್ಲಿ ಎಲ್ಲಾ ಪಂದ್ಯಗಳ ನೇರ ಪ್ರಸಾರವನ್ನು ಒದಗಿಸುತ್ತದೆ.

ಐಪಿಎಲ್ 2020 ರ ಆನ್‌ಲೈನ್ ಲೈವ್ ನವೀಕರಣಗಳನ್ನು ನಾನು ಎಲ್ಲಿ ಪರಿಶೀಲಿಸಬಹುದು?

ಹಲವಾರು ಜಾಲತಾಣಗಳಲ್ಲಿ ಲೈವ್ ಸ್ಕೋರ್ಸ್ ಲಭ್ಯವಾಗಿರಲಿದೆ. ಪ್ರಮುಖವಾಗಿ –
m.cricbuzz.com
www.espncricinfo.com

ಯುಎಇಯ ಯಾವ ನಗರಗಳು ಐಪಿಎಲ್ 2020 ಪಂದ್ಯಗಳನ್ನು ಆಯೋಜಿಸುತ್ತವೆ?

ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ. ಒಟ್ಟು 24 ಪಂದ್ಯಗಳು ದುಬೈನಲ್ಲಿ, 20 ಪಂದ್ಯಗಳು ಅಬುಧಾಬಿಯಲ್ಲಿ ಮತ್ತು 12 ಶಾರ್ಜಾದಲ್ಲಿ ನಡೆಯಲಿದೆ.

ಯುಎಇಯ ಯಾವ ಕ್ರೀಡಾಂಗಣಗಳು ಐಪಿಎಲ್ 2020 ಪಂದ್ಯಗಳನ್ನು ಆಯೋಜಿಸುತ್ತವೆ?

ಐಪಿಎಲ್ 2020 ರ ಎಲ್ಲಾ 60 ಪಂದ್ಯಗಳು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಶೇಖ್ ಜಾಯೆದ್ ಕ್ರೀಡಾಂಗಣ ಮತ್ತು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಐಪಿಎಲ್ 2020 ರಲ್ಲಿ ಯಾವ ತಂಡಗಳು ಭಾಗವಹಿಸುತ್ತಿವೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ),
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ),
ದೆಹಲಿ ಕ್ಯಾಪಿಟಲ್ಸ್ (ಡಿಸಿ),
ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್),
ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ),
ಮುಂಬೈ ಇಂಡಿಯನ್ಸ್ (ಎಂಐ),
ರಾಜಸ್ಥಾನ್ ರಾಯಲ್ಸ್ (ಆರ್ಆರ್) ಮತ್ತು
ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್)

LEAVE A REPLY

Please enter your comment!
Please enter your name here