ಐಪಿಎಲ್-2021 ಮುಂದುವರೆಸುವತ್ತ ಬಿಸಿಸಿಐ ಚಿಂತನೆ – ಯುಎಇ ಅಥವಾ ಇಂಗ್ಲೆಂಡ್‌ನಲ್ಲಿ ಆಯೋಜನೆ?

0
209
Tap to know MORE!

ಏಪ್ರಿಲ್ 9 ರಂದು ಶುರುವಾಗಿದ್ದ ಐಪಿಎಲ್​ಗೆ ಕೊರೋನಾ ಕಾರಣದಿಂದ ಮೇ 4 ರಂದು ತೆರೆ ಬಿದ್ದಿದೆ. ಇತ್ತ 29 ಪಂದ್ಯಗಳನ್ನು ಆಯೋಜಿಸಿರುವ ಬಿಸಿಸಿಐಗೆ ಉಳಿದ 31 ಪಂದ್ಯಗಳನ್ನು ಆಯೋಜಿಸುವುದು ಇದೀಗ ಸವಾಲಾಗಿ ಪರಿಣಮಿಸಿದೆ. ಏಕೆಂದರೆ ದೇಶದಲ್ಲಿನ ಕೊರೋನಾ ಪರಿಸ್ಥಿತಿಯಿಂದಾಗಿ ಸದ್ಯಲ್ಲಂತು ಟೂರ್ನಿ ಆಯೋಜಿಸಲು ಸಾಧ್ಯವಿಲ್ಲ. ಹೀಗಾಗಿ ಟೂರ್ನಿ ಆಯೋಜನೆಗಾಗಿ ಇರುವ ಅನ್ಯ ಮಾರ್ಗಗಳನ್ನು ಬಿಸಿಸಿಐ ಎದುರು ನೋಡುತ್ತಿದೆ.

ಸದ್ಯ ಬಿಸಿಸಿಐ ಮುಂದೆ ಮೂರು ಆಯ್ಕೆಗಳಿದ್ದು, ಅದರಂತೆ ಮೊದಲ ಆಯ್ಕೆ ಯುಎಇ. ಇದಾಗ್ಯೂ ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾದಲ್ಲಿ ಅವಕಾಶ ದೊರೆತರೆ ಟೂರ್ನಿಯ ಉಳಿದ ಪಂದ್ಯಗಳನ್ನು ನಡೆಸಲು ಚಿಂತಿಸಲಾಗಿದೆ. ಏಕೆಂದರೆ ಈ ಮೂರು ದೇಶಗಳಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಅದರಲ್ಲೂ ಯುಎಇನಲ್ಲಿ ಬಿಸಿಸಿಐ ಕಳೆದ ವರ್ಷ ಟೂರ್ನಿಯನ್ನು ಆಯೋಜಿಸಿದ್ದು, ಹೀಗಾಗಿ ಉಳಿದ ಪಂದ್ಯಗಳನ್ನು ಅಲ್ಲೇ ನಡೆಸುವ ಪ್ಲ್ಯಾನ್​ನಲ್ಲಿದೆ.

ಕ್ರಿಕೆಟ್ ದಕ್ಷಿಣ ಆಫ್ರಿಕಾ ಮೇಲೆ ಸರ್ಕಾರದ ಹಿಡಿತ – ಐಸಿಸಿಯಿಂದ ನಿಷೇಧದ ಭೀತಿ

ಇದರ ಬೆನ್ನಲ್ಲೇ ಇಂಗ್ಲೆಂಡ್ ಮತ್ತು ವೇಲ್ಸ್​ ಕೌಂಟಿ ಕ್ರಿಕೆಟ್ ಕ್ಲಬ್​ಗಳು ಇದೀಗ ಐಪಿಎಲ್ ಟೂರ್ನಿಯ ಆತಿಥ್ಯವಹಿಸಲು ಮುಂದೆ ಬಂದಿರುವುದು ವಿಶೇಷ. ಕೊರೋನಾ ಕಾರಣದಿಂದಾಗಿ ಅರ್ಧಕ್ಕೆ ನಿಂತಿರುವ ಐಪಿಎಲ್ ಟೂರ್ನಿಯನ್ನು ಇಂಗ್ಲೆಂಡ್‌ನಲ್ಲಿ ನಡೆಸಲಿ ಎಂದು ಎಂಸಿಸಿ, ಸರ್ರೆ, ವಾರ್ವಿಕ್‌ಷೈರ್ ಮತ್ತು ಲಂಕಾಷೈರ್ ಕೌಂಟಿಗಳು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ಗೆ ಪತ್ರವನ್ನು ಬರೆದಿವೆ. ಈ ಪತ್ರದಲ್ಲಿ ಐಪಿಎಲ್ ಆಯೋಜನೆಗೆ ಬೇಕಾದ ಎಲ್ಲಾ ರೀತಿಯ ನೆರವು ನೀಡುವುದಾಗಿ ಈ ಕ್ಲಬ್​ಗಳು ತಿಳಿಸಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಟೂರ್ನಿಯ ಉಳಿದ ಪಂದ್ಯಗಳನ್ನು 2 ವಾರಗಳ ಒಳಗೆ ಮುಗಿಸಬಹುದಾಗಿದ್ದು, ಹೀಗಾಗಿ ಬಿಸಿಸಿಐಗೆ ಯುಎಇಗಿಂತ ಇಂಗ್ಲೆಂಡ್ ಉತ್ತಮ ಆಯ್ಕೆ. ಏಕೆಂದರೆ ಭಾರತದಿಂದ ಟಿ20 ವಿಶ್ವಕಪ್ ಯುಎಇಗೆ ಶಿಫ್ಟ್ ಆಗುವ ಸಾಧ್ಯತೆಯಿದ್ದು, ಅಲ್ಲೇ ಐಪಿಎಲ್ ಆಯೋಜಿಸಿದರೆ ಟಿ20 ವಿಶ್ವಕಪ್ ಟೂರ್ನಿಯ ಅಸಲಿ ಮಜಾ ಕಳೆದುಕೊಳ್ಳಲಿದೆ. ಹೀಗಾಗಿ ಇಂಗ್ಲೆಂಡ್​ನಲ್ಲಿ ಐಪಿಎಲ್ ಆಯೋಜಿಸಿ, ಯುಎಇನಲ್ಲಿ ಟಿ20 ವಿಶ್ವಕಪ್ ನಡೆಸುವುದು ಸೂಕ್ತ ಎಂದು ಕೌಂಟಿ ಕ್ಲಬ್​ಗಳು ಪತ್ರದ ಮೂಲಕ ಅಭಿಪ್ರಾಯಪಟ್ಟಿವೆ.

PM CARES ಫಂಡ್‌ಗೆ ₹37 ಲಕ್ಷ ದೇಣಿಗೆ ನೀಡಿದ ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮಿನ್ಸ್

ಬಿಸಿಸಿಐ ಒಪ್ಪಿಗೆ ಸೂಚಿಸಿದರೆ, ಸೆಪ್ಟೆಂಬರ್ ತಿಂಗಳಿನಲ್ಲಿಯೇ ನಾವು ಐಪಿಎಲ್ ಆತಿಥ್ಯವನ್ನು ವಹಿಸಿಕೊಳ್ಳಲು ಸಿದ್ಧ. ಇದಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿಗಳನ್ನು ಶೀಘ್ರದಲ್ಲೇ ಮಾಡಿಕೊಳ್ಳಲಿದ್ದೇವೆ ಎಂದು ಇಂಗ್ಲೆಂಡ್ ಕೌಂಟಿ ಕ್ರಿಕೆಟ್‍ ಕ್ಲಬ್‌ಗಳು ತಿಳಿಸಿದೆ. ಟೂರ್ನಿ ಆಯೋಜನೆ ಬಗ್ಗೆ ಸಂಕಷ್ಟಕ್ಕೆ ಸಿಲುಕಿದ್ದ ಬಿಸಿಸಿಐಗೆ ಇಂಗ್ಲೆಂಡ್ ಕ್ರಿಕೆಟ್ ಕೌಂಟಿ ಕ್ಲಬ್​ಗಳು ಭರ್ಜರಿ ಆಫರ್ ನೀಡಿದ್ದು, ಈ ಪ್ರಸ್ತಾಪವನ್ನು ಬಿಸಿಸಿಐ ಒಪ್ಪಿಕೊಳ್ಳುತ್ತಾ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here