ಕೊರೋನಾದೊಂದಿಗೆ ಐಪಿಎಲ್ ಪಂದ್ಯಾವಳಿ

0
202
Tap to know MORE!

ಜಗತ್ತಿನಾದ್ಯಂತ ಕಾಡುತ್ತಿರುವ ಕೊರೊನಾ ವೈರಸ್ ಎಂಬ ಮಹಾಮಾರಿ ರೋಗವು ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಿದೆ. ಅದೇ ರೀತಿ ಕ್ರೀಡಾ ಚಟುವಟಿಕೆ ಕೂಡ ಸ್ತಬ್ಧವಾಗಿದೆ. ಇತ್ತಿಚೀನ ದಿನಗಳಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳು ಹಂತ-ಹಂತವಾಗಿ ಪುನರಾರಂಭಗೊಳ್ಳುತ್ತಿವೆ. ಅದೇ ರೀತಿಯಾಗಿ ಮುಂದೂಡಲಾಗಿದ್ದ “ಟಿ-20 ಐಪಿಎಲ್ ” ಆಟವನ್ನು ಬಿಸಿಸಿಐ ಕ್ರಿಕೆಟ್ ಮಂಡಳಿ ನಡೆಸಲು ಮುಂದಾಗಿದೆ. ಇದರಂತೆ ಕ್ರಿಕೆಟ್‌ನ ಮನರಂಜನೆ ಮತ್ತೊಮ್ಮೆ ಮರುಕಳಿಸಲಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್-19 ದಿಂದಾಗಿ ಐ.ಪಿ.ಎಲ್(ಇಂಡಿಯನ್ ಪ್ರೀಮಿಯರ್ ಲೀಗ್)ಅನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂದಿದ್ದರು. ಬದಲಾಗಿ ಬಿಸಿಸಿಐ ಅವರು ದುಬೈ ದೇಶದಲ್ಲಿ ಏಮಿರೇಟ್ಸ ಕ್ರಿಕೆಟ್ ಬೋರ್ಡ್ ಅವರೊಂದಿಗೆ ಸಭೆ ನಡೆಸಿ ಅದರಂತೆ ಅರಬ್ ದೇಶಗಳಲ್ಲಿ ನಡೆಸಲು ಮುಂದಾಗಿದೆ.

ಇದನ್ನೂ ನೋಡಿ : ಡ್ರೀಮ್ 11 ಐಪಿಎಲ್ 2020 ಅಧಿಕೃತ ವೇಳಾಪಟ್ಟಿ

ಐ.ಪಿ.ಎಲ್ ಬೇರೆ ಎಲ್ಲಾ ಬಗೆಯ ಕ್ರೀಡೆಗಳಿಗಿಂತ ಹೆಚ್ಚು ವಿಶಿಷ್ಟ. ಇಲ್ಲಿ ಭಾರತದ ಕ್ರಿಕೆಟ್ ಆಟಗಾರರು ಅದರಂತೆ ವಿದೇಶಿ ಆಟಗಾರರು ಆಡುತ್ತಾರೆ. ಹಾಗೆಯೇ ಭಾರತದ ಆಟಗಾರರ ಪ್ರತಿಭೆ ಭಾರತದ ನೆಲದಲ್ಲಿ ಅರಳಲಿ ಮತ್ತು ಬಿಸಿಸಿಐಗೆ ಇನ್ನಷ್ಟು ಬಲ ಬರಲಿ ಮತ್ತು ಬಿಸಿಸಿಐ ಬೋರ್ಡ್ ಅವರಿಗೆ ಇನ್ನಷ್ಟು ಸಮರ್ಥ, ಬಲಿಷ್ಠವಾಗಿ ಬಂದು ವಿಶ್ವ ಕ್ರೀಕೆಟ್ನಲ್ಲಿ ಅಗ್ರಸ್ಥಾನಕ್ಕೆ ಏರಬೇಕೆಂಬ ಆಸೆಯಿದೆ.

ಅಂತರಾಷ್ಟ್ರೀಯ ಮತ್ತು ದೇಶಿಯ ಕ್ರಿಕೆಟ್ ಆಟಗಾರರಿಗೆ ಈ ಐಪಿಎಲ್ ಒಂದು ಸುಂದರವಾದ ಅವಕಾಶ ಹಾಗೂ ಅವರ ದುಡಿಮೆಗೆ ಇದೊಂದು ಒಳ್ಳೆಯ ಬುನಾದಿ. ಇಲ್ಲಿ ಒಂದು ಸಲ ಕಷ್ಟ ಪಟ್ಟು ಸ್ಥಾನ ಗಳಿಸಿದರೆ, ಅವರ ಭವಿಷ್ಯ ಸುಖಮಯವಾಗಿರುತ್ತದೆ. ಹಾಗೆಯೇ ಯುವ ಪ್ರತಿಭೆಗಳಿಗೆ ಇದೊಂದು ಅತ್ಯದ್ಭುತ ಅವಕಾಶ ತಮ್ಮ ಹೆಸರಿನ ಕೀರ್ತಿ ಪತಾಕೆ ವಿಶ್ವವ್ಯಾಪಿಗಳಿಸಲು ಸುದೈವ್.

ಐಪಿಎಲ್ ತನ್ನ 13ನೇ ವರ್ಷದ ಸಂಭ್ರಮದಲ್ಲಿದೆ. ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ದೀರ್ಘಕಾಲದ ಪಂದ್ಯಾವಳಿಗೆ ಕ್ರೀಡಾ ಜಗತ್ತಿನಲ್ಲಿ ಒಂದು ವಿಶೇಷ ಸ್ಥಾನವಿದೆ. ಈ ಕ್ರಿಕೆಟ್ ಜಗತ್ತಿನ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಸಮಯ ಬಂದಿದೆ. ಅವರವರ ಹೀರೊಗಳನ್ನು ಮತ್ತೆ ಕ್ರೀಡಾಂಗಣದಲ್ಲಿ ನೋಡುವ ಅವಕಾಶ ಬಂದಿದೆ. ಕೊರೋನಾ ಭೀತಿಯಿಂದಾಗಿ, ಮನೆಯಲ್ಲೇ ದಿಗ್ಭಂದನರಾಗಿ ಬೇಸರದಿಂದ ಸಮಯವನ್ನು ಕಳೆಯುತ್ತಿದ್ದವರಿಗೆ ಈಗ ಐ.ಪಿ.ಎಲ್ ಒಂದು ರೀತಿಯ ಅತ್ಯುತ್ತಮ ಮನರಂಜನೆಯನ್ನು ನೀಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು.

ಅಣಬೆ ತರಹ ಹರಡಿರುವ ಪ್ಯಾಂಟಸಿ ಗೇಮಿಂಗ ಸೈಟಗಳಾದ ಡ್ರೀಮ ಇಲೆವನ್, ಇಂಡಸ್ ಗೇಮ್ಸ್, ಫ್ಯಾಂಟೇನ್, ಮೈ ಟೀಮ್ ಇಲೆವನ್, ಫ್ಯಾನ್ಸ ಪೋಲ ಫ್ರೀ, ಸೂಪರ್ ಏಟ್ ಫ್ಯಾಂಟಸಿ, ಬ್ಯಾಕ್ ಬೋರ್ಡ ಕಿಂಗ್, ಪ್ಲೇ ಇಲೆವನ್, ಪ್ಲೇಯರ್ಸಪಾಟ್, ಮೈ ಇಲೆವನ್ ಸರ್ಕಲ್, ಬಲ್ಲೇ ಬಾಜಿ, ಹೌಜ್ಯಾಟ್, ಗೇಮ್ಜಿ, ಫ್ಯಾನ ಪೈಟ್, ಪ್ರೈಮ ಕ್ಯಾಪ್ಟನ್ ಇದರಲ್ಲಿ ಗೆಲ್ಲುವ ತಂಡಗಳ ಆಯ್ಕೆ, ಆಟಗಾರರನ್ನು ಆಯ್ಕೆ ಮಾಡುವ ಟಿ-20 ಕ್ರೀಕೆಟ್ನ್ನು ಇನ್ನಷ್ಟು ಕೂತುಹಲ, ಆಸಕ್ತದಾಯಕವನ್ನಾಗಿಸಿದೆ. ಈ ಸೈಟಗಳ ಮೂಲಕ ಪಣತೊಡಬಹುದಾದ ಮತ್ತು ಪ್ರತಿಯಾಗಿ ದೊಡ್ಡ ಪ್ರಮಾಣದ ಹಣದ ಮೊತ್ತದ ಗೆಲುವು ಸಾಧಿಸಬಹುದೆಂಬ ಅನೇಕ ಜನರಿಗೆ ಇದು ಆಸಕ್ತಿಯನ್ನು ತಂದಿದೆ. ಆಟಗಳ ಕಡಿಮೆ ಸ್ವರೂಪದ ಯಶಸ್ಸಿಗೆ ಜೂಜಾಟವು ಒಂದು ಪ್ರಮುಖ ಕಾರಣವಾಗಿದೆ. ಒಂದು ನಿರ್ದಿಷ್ಟ ಫಲಿತಾಂಶದಂತೆ ಮತ್ತು ಆಯ್ಕೆ ಮಾಡಲು ಸಾಕಷ್ಟು ಕ್ರಮಪಲ್ಲಟನೆ ಮತ್ತು ಸಂಯೋಜನೆಯೊಂದಿಗೆ, ವಿಶೇಷವಾಗಿ ಟಿ-20 ಆವೃತ್ತಿಯಲ್ಲಿ ಒಬ್ಬರ ಅದೃಷ್ಟವನ್ನು ಪ್ರಯತ್ನಿಸುವ ಅವಕಾಶಗಳು ಸಾಕಷ್ಟು.

ಯು.ಎ.ಇ. ರಾಷ್ಟ್ರದಲ್ಲಿ ಐಪಿಎಲ್ ಚುಟುಕು ಟಿ-20 ಕ್ರಿಕೆಟ್ ಆಟವನ್ನು ಸಂಘಟಿಸುವಲ್ಲಿ ಬಿಸಿಸಿಐ ಕ್ರೀಕೆಟ್ ಮಂಡಳಿ ಆಗಾಧ ಕಾರ್ಯವನ್ನು ಹೊಂದಿದೆ. 2008ರಲ್ಲಿ ದಕ್ಷಿಣ ಆಫ್ರೀಕಾ ದೇಶದಲ್ಲಿ ಪೂರ್ಣ ಪ್ರಮಾಣದ ಆವೃತ್ತಿ ಸೇರಿದಂತೆ, ಭಾರತದ ಹೊರಗೆ ಎರಡು ಸಂದರ್ಭಗಳಲ್ಲಿ ಲೀಗನ್ನು ಆಡಲಾಯಿತು. ಹಾಗೆಯೇ, 2014ರಲ್ಲಿ ಯು.ಎ.ಇಯಲ್ಲಿ ಕೆಲವು ಆರಂಭಿಕ ಪಂದ್ಯಗಳನ್ನು ಆಡಲಾಯಿತು. ಆದರೆ ಈ ಎರಡು ಸಂದರ್ಭಗಳಲ್ಲಿ ಆಟವನ್ನು ಆತಿಥ್ಯವಹಿಸುವ ಸೌಲಭ್ಯಗಳಿಗಿಂತ ಹೆಚ್ಚೆನು ಅಗತ್ಯವಿರಲಿಲ್ಲ.

ಆದಾಗ್ಯೂ ಕೋವಿಡ್-19 ಸಾಂಕ್ರಾಮಿಕವು ಐಪಿಎಲ್ ತಂಡಗಳು ಮತ್ತು ಸಹಾಯಕ ಸಿಬ್ಬಂದಿ ಜೈವಿಕ ಸುರಕ್ಷಿತದೊಂದಿಗೆ ಕೊರೋನಾದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ವಿಭಿನ್ನಗೊಳಿಸಿದೆ. ಆದ್ದರಿಂದ, ಇದು ಆಟಗಾರರಿಗೆ ಮಾತ್ರವಲ್ಲದೆ ನಿರ್ವಾಹಕರಿಗೆ ಸಂಪೂರ್ಣವಾಗಿ ವಿಭಿನ್ನವಾದ ಚೆಂಡಿನ ಆಟವಾಗಿರುತ್ತದೆ. ಇತ್ತಿಚಿಗೆ ವೆಸ್ಟ ಇಂಡೀಸ್ ವಿರುದ್ದ ಮೂರು ಟೆಸ್ಟ ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸಲು ಇಂಗ್ಲೇಂಡ್ ದೇಶದವರು ಯಶಸ್ವಿಯಾಗಿದ್ದರು. ಆದಾಗ್ಯೂ, ಭಾಗವಹಿಸುವ ಎಂಟು ತಂಡಗಳೊಂದಿಗೆ ಬಿಸಿಸಿಐ ಮಂಡಳಿ ಹಾಗೇ ಮಾಡುವುದು ಖಂಡಿತವಾಗಿಯೂ ದೊಡ್ಡ ಸವಾಲಾಗಿದೆ.

ಕ್ರಿಕೆಟ‌ನ್ನು ಮೈದಾನದಲ್ಲಿ ಆಡುವುದಕ್ಕೆ ಸಂಭಂದಿಸಿದಂತೆ ಒಂದು ದೊಡ್ಡ ಬದಲಾವಣೆಯನ್ನು ಕಾಣುವುದಿಲ್ಲ. ಕಾಣೆಯಾದ ಪ್ರಮುಖ ಅಂಶವೆಂದರೆ ಪ್ರೇಕ್ಷಕರ ಕಿರುಚಾಟ ಮತ್ತು ಕೂಗುಗಳು ಮತ್ತು ಸ್ಥಳೀಯ ಅಭಿಮಾನಿಗಳಿಲ್ಲದಿರುವುದು. ಐಪಿಎಲ್ 20-20 ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಮನರಂಜನೆಯು ಒಂದು ನವೀನ ಸೃಷ್ಠಿಯ ಸ್ಪರ್ಶವನ್ನು ಹೊಂದಿರಬೇಕು. ಆದ್ದರಿಂದ ಸ್ಟಾರ್ಸ್ ಚಾನಲಗಳ, ಐಪಿಎಲ್ ಪ್ರಾಯೋಜಕರು ಮತ್ತು ಫ್ರಾಂಚೈಸಿಗಳು ತಮ್ಮ ನಿಷ್ಠಾವಂತ ಜೀವಂತವಾಗಿರುಸುವುದಲ್ಲದೆ, ತಮ್ಮ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದರೆ ಅವರನ್ನು ಸಕ್ರಿಯವಾಗಿರಿಸುವುದರ ಬಗ್ಗೆ ತಮ್ಮದೇ ಆದ ಯೋಜನೆ ಹೇಗೆ ಸೃಷ್ಠಿಸುವುದು ವಿಚಾರ ಮಾಡುತ್ತದೆ

ಡಿಜಿಟಲ್ ಪ್ರಪಂಚವು ಚಿಮ್ಮಿ ಗಡಿರೇಖೆ ಮತ್ತು ದೃಶ್ಯಗಳು, ವರ್ಚುವಲ್ ಚಿತ್ರಗಳು ಕಾಲ್ಪನಿಕ ಪ್ರೇಕ್ಷಕರ ಮತ್ತು ಶಬ್ದದ ವಾತಾವರಣವನ್ನು ಸೃಷ್ಟಿಸುವ ಮೂಲಕ ಪ್ರಗತಿ ಸಾಧಿಸಿದೆ. ದುರದೃಷ್ಟವಶಾತ ಆಟಗಾರರು ಒಟ್ಟಿಗೆ ಸೇರಲು ಲಭ್ಯವಿರುವುದಿಲ್ಲ. ಲೈವ್ ಇವೆಂಟಗಳು ಮತ್ತು ಪ್ರಾಯೋಜಕರು ಚಾಟ್ ಶೋಗಳು, ಸಂವಾದಾತ್ಮಕ ವರ್ಚುವಲ್ ಸೆಷನಗಳ ಮೂಲಕ ಅವರೊಂದಿಗೆ ಸಂವಹನ ನಡೆಸುವ ಮಾರ್ಗಗಳನ್ನು ಕಂಡುಹಿಡಿಯಬೇಕಾಗುತ್ತದೆ.

ಟಿ-20 ಕ್ರಿಕೆಟ್ ಯಾವಾಗಲು ಒಂದು ಸ್ವರೂಪವಾಗಿದ್ದು ಅದು ಬಹಳ ಜನಪ್ರಿಯವಾಗಿದೆ ಎಂದು ತೋರಿಸಿದೆ. ಭಾರತದ ಕೆಲವು ಕ್ರಿಕೆಟ ರಾಜ್ಯ ಸಂಘಗಳು ನಡೆಸುವ ಕೆಲವು ಲೀಗಗಳು ಪ್ರಸಿದ್ಧ ಅಂತರರಾಷ್ಟ್ರೀಯ ಆಟಗಾರರಿಲ್ಲದೆ ಯಶಸ್ವಿಯಾಗಿದೆ ಎಂದು ಸಾಬೀತಾಗಿದೆ. ಆದ್ದರಿಂದ ದೂರದರ್ಶನದಲ್ಲಿ ಆಥವಾ ಅವರ ಮೊಬೈಲಗಳಲ್ಲಿ ಲಕ್ಷಾಂತರ ವೀಕ್ಷಕರು ಆಟಗಳನ್ನು ನೋಡುವ ಬಗ್ಗೆ ಯಾವುದೇ ಸಮಸ್ಯೆಗಳಾಗುವುದಿಲ್ಲ. ಅವರು ಹೇಗೆ ಮನರಂಜನೆ ಪಡೆಯುತ್ತಾರೆ, ತೋಡಗಿಸಿಕೊಳ್ಳುತ್ತಾರೆ ಮತ್ತು ಆಸಕ್ತರಾಗಿರುತ್ತಾರೆ ಅದು ಪೂರೈಕೆದಾರರಿಗೆ ಸವಾಲಾಗಿರುತ್ತದೆ.

ರಾಜಸ್ಥಾನ ರಾಯಲ್ಸ ತಂಡದ ಮಾಸ್ಟರ್ ಬ್ಯಾಟ್ಸಮನ್ ಸ್ಟೀವ್ ಸ್ಮಿತರನ್ನು ಹೊಂದಿರುವುದರಿಂದ ಅವರನ್ನು ನಿಕಟವಾಗಿ ಅನುಸರಿಸಲಾಗುವುದು. ವಿಶ್ವದ ಅತ್ಯುತ್ತಮ ಆಲರೌಂಡ್ ಕ್ರಿಕೆಟಿಗ ಬೆನ್ ಸ್ಟೋಕ್ಸ್ ಮತ್ತು ಹೊಸ ಸಂವೇದನಾಶೀಲ ವೇಗದ ಬೌಲರ ಜೋಫ್ರಾ ಆರ್ಚರ್. ಹೇಗಾದರೂ, ಎಲ್ಲಾ ಕಣ್ಣುಗಳು ಮಹೇಂದ್ರ ಸಿಂಗ್ ದೋನಿ ಆವರ ಮೇಲೆ ಇರುತ್ತದೆ. ಒಂದು ದಶಕಕ್ಕೂ ಹೆಚ್ಚು ಕಾಲ ಇರುವ ವ್ಯಕ್ತಿ ಪ್ರತಿಯೊಬ್ಬ ಭಾರತೀಯ ಕ್ರೀಕೆಟ್ ಪ್ರೇಮಿಗಳ ಹೃದಯವನ್ನು ಸೆರೆಹಿಡಿದಿದ್ದಾನೆ. ಇತ್ತಿಚೀಗೆ ದೋನಿ ತನ್ನ ಎಲ್ಲಾ ಅಂತರಾಷ್ಟ್ರೀಯ ಕ್ರೀಕೆಟ ಫಾರ್ಮೆಟದಿಂದ ನಿವೃತ್ತಿ ಹೋಂದಿದನು. ಐಪಿಲ್ ಮ್ಯಾಚನಲ್ಲಿ ದೋನಿಯ ಆಟವನ್ನು ಅಭಿಮಾನಿಗಳು ಕಣ್ಣು ತುಂಬಿಕೊಳ್ಳಬಹುದು.

ಯು.ಎ.ಇಯಲ್ಲಿ ಷಾರ್ಜಾ, ಅಬುಧಾಬಿ, ದುಬೈ ಮೂರು ಕಡೆ ಕ್ರೀಡಾಂಗಣದಲ್ಲಿ ಕ್ರೀಕೆಟ ಪಂದ್ಯ ನಡೆಯಲಿದೆ ಹಗಲು ಪಂದ್ಯಾವಳಿ ಮೊದಲು 4 ಗಂಟೆಗೆ ಪ್ರಾರಂಭವಾಗುತ್ತಿತ್ತು. ಆದರೆ ಈ ಸಲ ಹಗಲು ಪಂದ್ಯ ಅರ್ಧ ಗಂಟೆ ಮುಂಚೆ 3.30ಕ್ಕೆ ಹಾಗೂ ಸಂಜೆ ವೇಳೆ 8 ಗಂಟೆಯ ಪಂದ್ಯ 7.30ಕ್ಕೆ ಪ್ರಾರಂಭವಾಗಲಿದೆ. ಒಟ್ಟಾರೆಯಾಗಿ 60 ಪಂದ್ಯಗಳನ್ನು ಟಿ-20 ಐಪಿಲನಲ್ಲಿ ಈ ಬಾರಿ ಆಯೋಜಿಸಲಾಗಿದೆ. ಐಪಿಲ್ ಟಿ-20 ಪಂದ್ಯಗಳು ಸ್ಟಾರ ಸ್ಪೋಟ್ರ್ಸ ಹಾಗೂ ಡಿಸ್ನಿಪ್ಲಸ್ ಹಾಟಸ್ಟಾರ್‍ನಲ್ಲಿ ನೇರ ಪ್ರಸಾರವಾಗಲಿದೆ.

ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟಿಗರನ್ನು ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಮನೋರಂಜನೆಯ ಜತೆಗೆ ಕೊರೋನಾ ಸಂದರ್ಭದಲ್ಲಿ ಅಷ್ಟೆ ಭದ್ರತೆಯೊಂದಿಗೆ, ಸುರಕ್ಷಿತವಾಗಿ ಐಪಿಎಲ್ ಪಂದ್ಯಾವಳಿಗಳು ನಡೆಯಬೇಕಾಗಿದೆ.

ಸಿದ್ಧಾರ್ಥ್ ಸುಪಲಿ
ಆಳ್ವಾಸ್ ಕಾಲೇಜು, ಮೂಡುಬಿದಿರೆ

LEAVE A REPLY

Please enter your comment!
Please enter your name here