ಐಸಿಸ್ ಪ್ರೇರಿತ ಮ್ಯಾಗಜಿನ್ ನಡೆಸುತ್ತಿದ್ದ ಮೋಸ್ಟ್ ವಾಂಟೆಡ್ ಉಗ್ರ ಭಟ್ಕಳದಲ್ಲಿ ಸೆರೆ

0
1005
Tap to know MORE!

ಅಫ್ಘಾನಿಸ್ತಾನದಲ್ಲಿ ಇರೋದಾಗಿ ಹೇಳಿಕೊಂಡು ಭದ್ರತಾ ಏಜನ್ಸಿಗಳ ಕಣ್ಣು ತಪ್ಪಿಸಿ ಐಸಿಸ್ ರಿಕ್ರೂಟ್ ಮೆಂಟ್, ಐಸಿಸ್ ಮ್ಯಾಗಜಿನ್ ನಡೆಸುತ್ತಿದ್ದ ಮೋಸ್ಟ್ ವಾಂಟೆಡ್ ಐಸಿಸ್ ಉಗ್ರನನ್ನು ಎನ್ಐಎ ಅಧಿಕಾರಿಗಳು ಭಟ್ಕಳದಲ್ಲಿ ಸೆರೆಹಿಡಿದಿದ್ದಾರೆ.

ಬಂಧಿತನನ್ನು ಜುಫ್ರೀ ಜವ್ಹಾರ್ ದಾಮುದಿ ಅಕ ಅಬು ಹಾಜಿರ್ ಅಲ್ ಬದ್ರಿ ಎಂದು ಎನ್ಐಎ ಅಧಿಕಾರಿಗಳು ಗುರುತಿಸಿದ್ದಾರೆ. ಇಂದು ಮಧ್ಯಾಹ್ನ ಮಸೀದಿಗೆಂದು ಹೊರಗೆ ಬಂದಿದ್ದ ವೇಳೆ ಆತನನ್ನು ಸಹಚರ ಅಮೀನ್ ಜುಹೇಬ್ ಜೊತೆಗೆ ಬಂಧಿಸಿದ್ದಾರೆ. ಸಿರಿಯಾ ಮೂಲದ ಐಸಿಸ್ ಸಂಘಟನೆಗೆ ಯುವಕರನ್ನು ಸೇರಿಸುವುದು ಸೇರಿದಂತೆ ಐಸಿಸ್ ಸಂಬಂಧೀ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡುತ್ತಿದ್ದರಲ್ಲಿ ನಿಪುಣನಾಗಿದ್ದ. ಕಂಪ್ಯೂಟರ್ ಮತ್ತು ಮೊಬೈಲ್ ತಾಂತ್ರಿಕತೆಯಲ್ಲಿ ಅತ್ಯಂತ ಪರಿಣತಿ ಪಡೆದಿದ್ದ.

ಇದಲ್ಲದೆ, ತನ್ನ ಕೆಲಸಕ್ಕಾಗಿ ಇಂಡಿಯನ್ ಮುಜಾಹಿದೀನ್ ಸಂಘಟನೆಯಿಂದ ಫಂಡಿಂಗ್ ಪಡೆಯುತ್ತಿದ್ದ. ಅಫ್ಘಾನಿಸ್ತಾನದ ಐಸಿಸ್ ಖೊರಸಾನ್ ಉಗ್ರರ ಜೊತೆ ಡೈರೆಕ್ಟ್ ಸಂಪರ್ಕವನ್ನೂ ಸಾಧಿಸಿದ್ದ. ಈತನಿಗೆ ಸ್ಫೋಟಕ ಇನ್ನಿತರ ಶಸ್ತ್ರಾಸ್ತ್ರಗಳ ಪೂರೈಕೆ ಬಗ್ಗೆಯೂ ಮಾಹಿತಿಗಳು ಬರುತ್ತಿದ್ದವು. ಸೈಬರ್ ಕಾಂಟ್ಯಾಕ್ಟ್ ಮೂಲಕ ಕಾಫಿರರನ್ನು ಕೊಂದು ಹಾಕಲು ಪ್ರೇರಣೆ ನೀಡುತ್ತಿದ್ದ. ಪೊಲೀಸರು, ಪತ್ರಕರ್ತರು ಹಿಟ್ ಲಿಸ್ಟ್ ನಲ್ಲಿದ್ದು ಸರಕಾರಿ ಆಸ್ತಿಗಳು, ದೇವಸ್ಥಾನಗಳನ್ನು ಒಡೆದು ಹಾಕುವುದು ಈತನ ಪ್ರಮುಖ ಟಾರ್ಗೆಟ್ ಆಗಿದ್ದವು.

LEAVE A REPLY

Please enter your comment!
Please enter your name here