ನವದೆಹಲಿ ಸೆ.5: ದೇಶದ ಎಲ್ಲಾ ಜಿಲ್ಲೆಗಳು ತಮ್ಮದೇ ಆದ ಉತ್ಕೃಷ್ಟ ಮಟ್ಟದ ಉತ್ಪನ್ನಗಳ ಮೇಲೆ ತಮ್ಮ ಶಕ್ತಿಯನ್ನು ಕೇಂದ್ರೀಕರಿಸುವಂತೆ ಸಹಾಯ ಮಾಡಲು ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶನಿವಾರ ಹೇಳಿದರು.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’ ಶ್ರೇಯಾಂಕದ ಬಿಡುಗಡೆಯಲ್ಲಿ ಮಾತನಾಡಿದ ಗೋಯಲ್, ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ 20 ಲಕ್ಷ ಕೋಟಿ ರೂ.ಗಳ ಹೊಸ ಉತ್ಪಾದನೆಯನ್ನು ಸೇರಿಸುವ ವಿಶ್ವಾಸವಿದೆ ಎಂದು ಹೇಳಿದರು.
“ನಾವು ಉದ್ಯಮದ ಸಹಭಾಗಿತ್ವದಲ್ಲಿ ಈಗಾಗಲೇ, 24 ಉತ್ಪನ್ನಗಳನ್ನು ಗುರುತಿಸಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ 20 ಟ್ರಿಲಿಯನ್ ರೂ. ಉತ್ಪಾದನೆಯನ್ನು ಸೇರಿಸುವ ವಿಶ್ವಾಸವಿದೆ. ಇದು ಉದ್ಯೋಗಗಳನ್ನೂ ಸೃಷ್ಟಿಸುವುದು ಮಾತ್ರವಲ್ಲದೆ, ಆರ್ಥಿಕ ಚಟುವಟಿಕೆಯನ್ನು ವಿಸ್ತರಿಸುತ್ತದೆ ಮತ್ತು ಉತ್ಪನ್ನಗಳು ಭಾರತದ ಸರಿಯಾದ ಸ್ಥಳದತ್ತ ಸಾಗಲಿದೆ” ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ಉಲ್ಲೇಖಿಸಿದೆ ಅವರು ಹೇಳುವಂತೆ.
ಜಿಲ್ಲೆಗಳ ಸಾಂಪ್ರದಾಯಿಕ ಕೈಗಾರಿಕೆಗಳನ್ನು ಉತ್ತೇಜಿಸಲು, ಎರಡು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಉದ್ಘಾಟಿಸಲಾದ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಕಾರ್ಯಕ್ರಮದ ಮಾರ್ಗಗಳನ್ನು ಆಧರಿಸಿ ಕೇಂದ್ರವು ಈ ಯೋಜನೆ ರೂಪಿಸಿದೆ.