ಒಂದೇ ಸೂರಿನಡಿ ಕೊರೊನಾ ಗೆದ್ದ 4 ತಲೆಮಾರಿನ 7 ಜನರು..!!

0
200
Tap to know MORE!

ಕೋವಿಡ್ ಸೋಂಕಿನ ವಿರುದ್ಧ ಒಟ್ಟಿಗೆ ಹೋರಾಡಿದ ಕುಟುಂಬ, ಒಟ್ಟಿಗೆ ಗೆಲ್ಲುತ್ತದೆ..!! ಇದೇನಿದು ಎಂದು ಆಶ್ಚರ್ಯ ಪಡುತ್ತಿದ್ದಾರೆ ಖಂಡಿತ ಇದು ನೈಜ ಘಟನೆ. ಒಂದೇ ಸೂರಿನಡಿ ನಾಲ್ಕು ತಲೆಮಾರುಗಳನ್ನು ಒಳಗೊಂಡಿರುವ ಸೂರತ್ ನ ಕುಟುಂಬವು ಏಳು ಸದಸ್ಯರನ್ನು ಒಂದರ ನಂತರ ಒಂದರಂತೆ ಸಿಲುಕಿಸಿದ ಮಾರಕ ಸೋಂಕಿನ ವಿರುದ್ಧ ಯಶಸ್ವಿಯಾಗಿ ಹೋರಾಡಿದೆ. ಏಳು ಜನರಲ್ಲಿ 106 ವರ್ಷದ ವ್ಯಕ್ತಿಯೂ ಇದ್ದಾರೆ..!

ಇದು ನಿಜಕ್ಕೂ ರಿಯಲ್ ಎಸ್ಟೇಟ್ ಡೆವಲಪರ್ ಖೋಡಿದಾಸ್ ಗೋಯಾನಿ (36) ಅವರ ಸೋಂಕಿತ ಕುಟುಂಬ ಸದಸ್ಯರ ಕಥೆಯಾಗಿದೆ. ಮೂರೂವರೆ ವರ್ಷದ ಹುಡುಗನಿಂದ ಹಿಡಿದು 106 ವರ್ಷದ ಅಜ್ಜನವರೆಗೆ – ಎಲ್ಲರೂ ಗಮನಾರ್ಹ ಚೇತರಿಕೆಯ ನಂತರ ಬುಧವಾರ ಸಾಮಾನ್ಯ ಸ್ಥಿತಿಗೆ ಮರಳಿದರು.

ಜೂನ್ 22 ರಂದು ಗೋಯಾನಿ ಅವರಿಗೆ ಕೆಮ್ಮುಮತ್ತು ಜ್ವರ ಲಕ್ಷಣಗಳು ಕಾಣಿಸಿಕೊಂಡ ನಂತರ ಕೊರೊನಾ ಪರೀಕ್ಷೆಯನ್ನು ಮಾಡಿಸುತ್ತಾರೆ. ಕೊರೊನಾ ವರದಿಯು ಜೂನ್ 25 ರಂದು ಪಾಸಿಟಿವ್ ಆಗಿ ಬಂತು. ಚಿಕಿತ್ಸೆಗಾಗಿ ಗೋಯಾನಿ ಅವರು ಹೋಮ್ ಐಸೋಲೇಶನ್ ಗೆ ಆದ್ಯತೆ ನೀಡುತ್ತಾರೆ. ಆದರೆ ಅವರದ್ದು 10 ಸದಸ್ಯರ ಕುಟುಂಬವಾದ್ದರಿಂದ, ಜುಲೈ 2 ರಂದು ಎಲ್ಲರನ್ನೂ ಸಹ ಪರೀಕ್ಷಿಸಲಾಯಿತು ಮತ್ತು ಕುಟುಂಬದ 6 ಜನರಿಗೆ ಕೊರೊನಾ ಇರುವುದು ದೃಢವಾಯಿತು.

ಮನೆಯ ಸದಸ್ಯರಿಗೂ ಕೊರೊನಾ ಇರುವ ವಿಷಯ ತಿಳಿದು ಕುಟುಂಬವು ಒಗ್ಗೂಡಿ ಕರೋನವೈರಸ್ ವಿರುದ್ಧ ಹೋರಾಡುವ ನಿರ್ಧಾರವನ್ನು ಮಾಡುತ್ತಾರೆ. ಕುಟುಂಬ ಸದಸ್ಯರೆಲ್ಲಾ ಕಟ್ಟುನಿಟ್ಟಾದ ವೇಳಾಪಟ್ಟಿಯನ್ನು ನಿರ್ಧರಿಸಿ ಅವರ ಮೂರು ಬಿಎಚ್‌ಕೆ ಮನೆಯಲ್ಲಿ ಒಟ್ಟಿಗೆ ಇರುವ ನಿರ್ಧಾರ ಮಾಡುತ್ತಾರೆ.

ಗೋಯಾನಿಯಲ್ಲದೆ, ಇತರ ಸೋಂಕಿತ ಸದಸ್ಯರಾದ ಅವರ ಅಜ್ಜ 106 ವರ್ಷದ ಗೋವಿಂದಭಾಯ್, 62 ವರ್ಷದ ತಂದೆ ಲಾಧಾಭಾಯ್, 60 ವರ್ಷದ ತಾಯಿ ಶಿವಕುನ್ವರ್ಬಾ , ಅವರ ಮೂರೂವರೆ ವರ್ಷದ ಮಗ ಸನತ್, ಸಹೋದರ 32 ವರ್ಷದ ಅಶ್ವಿನ್ ಮತ್ತು ಅಶ್ವಿನ್ ಅವರ ಗರ್ಭಿಣಿ ಪತ್ನಿ ಕಿಂಜಾಲ್ ಅವರೆಲ್ಲ ಒಟ್ಟಿಗೆ ಒಂದೇ ಮನೆಯಲ್ಲಿರುತ್ತಾರೆ. ನೆಗೆಟಿವ್ ವರದಿ ಬಂದ ಉಳಿದ ಮೂವರನ್ನು ಸುರಕ್ಷತೆಗಾಗಿ ಅವರ ಸಂಬಂಧಿಕರ ಮನೆಗೆ ಕಳುಹಿಸಲಾಗಿತ್ತು.

ವಾಸ್ತವದಲ್ಲಿ 106 ವರ್ಷದ ಅಜ್ಜನಿಗೆ ಪಾಸಿಟಿವ್ ವರದಿಯ ಬಗ್ಗೆ ಹೇಳಿಯೇ ಇರಲಿಲ್ಲವಂತೆ..! ಆದರೆ ಮುನ್ನೆಚ್ಚರಿಕೆಗಳ ಭಾಗವಾಗಿ ಔಷಧಿಗಳನ್ನು ತೆಗೆದುಕೊಂಡು ದಿನಚರಿಯನ್ನು ಅನುಸರಿಸಲು ಅಜ್ಜನಿಗೆ ಹೇಳಲಾಗಿತ್ತು. ಕೊರೊನಾ ನಿಯಂತ್ರಣದ ಮತ್ತು ಹೋರಾಟದ ಮಾರ್ಗಸೂಚಿಗಳೊಂದಿಗೆ ಅವರ ಕುಟುಂಬ ವೈದ್ಯರು ನೀಡಿದ  ಆಯುರ್ವೇದ ಔಷಧಿಗಳನ್ನು ನಿಯಮಿತವಾಗಿ ಪಾಲಿಸಿದರು.

“ನಮಗೆ ಸಾಕಷ್ಟು ನಂಬಿಕೆ ಇತ್ತು ಮತ್ತು ನಮ್ಮ ಯುದ್ಧವನ್ನು ಗೆಲ್ಲುವ ವಿಶ್ವಾಸವಿತ್ತು ಎಂದು ಭಾವನಗರ ಜಿಲ್ಲೆಯ ರೂಪಾವತಿ ಗ್ರಾಮದ ಸ್ಥಳೀಯರಾದ ಗೋಯಾನಿ ಸಂತೋಷದಿಂದ ಹೇಳುತ್ತಾರೆ. “ಕೋವಿಡ್ -19 ಪಾಸಿಟಿವ್ ಬಂದರೆ ಭಯಪಡಬೇಡಿ ಎಂದು ನಾನು ಎಲ್ಲ ಜನರನ್ನು ಕೋರುತ್ತೇನೆ. ಜನರಲ್ಲಿ ನಂಬಿಕೆ ಇರಬೇಕು ಮತ್ತು ವೈದ್ಯರ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಇದು ಸೋಂಕಿತರಿಗೆ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಗೋಯಾನಿ ಹೇಳಿದರು.

ಕುಟುಂಬಕ್ಕೆ ಚಿಕಿತ್ಸೆ ನೀಡುವ ವೈದ್ಯರಲ್ಲಿ ಒಬ್ಬರಾದ ಡಾ. ಮೇಧಾ ಪಟೇಲ್, “ಒಂದೇ ಕುಟುಂಬದ ಏಳು ಸದಸ್ಯರ ಚೇತರಿಕೆ ಗಮನಾರ್ಹವಾಗಿದೆ, ಅದರಲ್ಲೂ ವಿಶೇಷವಾಗಿ ಅವರ ವಯಸ್ಸು ಮತ್ತು ಅವರ ವೈದ್ಯಕೀಯ ಸ್ಥಿತಿಗತಿಗಳನ್ನು ಗಮನಿಸಬಹುದು. ಆದರೆ ಅವರಲ್ಲಿದ್ದ ನಂಬಿಕೆ ಮತ್ತು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದನ್ನು ನಾನು ಅಭಿನಂದಿಸಬೇಕು ಎಂದು ಹೇಳಿದರು

LEAVE A REPLY

Please enter your comment!
Please enter your name here