ಟೋಕಿಯೋ ಒಲಿಂಪಿಕ್ಸ್‌ಗೆ | ಆರಂಭಕ್ಕೂ ಮುನ್ನವೇ ಇಬ್ಬರು ಕ್ರೀಡಾಪಟುಗಳಿಗೆ ಕೋವಿಡ್ ಸೋಂಕು ದೃಢ!

0
146
Tap to know MORE!

ಟೋಕಿಯೋ: ಟೋಕಿಯೋ ಒಲಿಂಪಿಕ್ ಆರಂಭಕ್ಕೂ ಮೊದಲೇ ಕೋವಿಡ್ ಭೀತಿ ಎದುರಾಗಿದೆ. ಇಲ್ಲಿನ ಕ್ರೀಡಾಗ್ರಾಮದಲ್ಲಿ ಇಬ್ಬರು ಕ್ರೀಡಾಪಟುಗಳಿಗೆ ಕೋವಿಡ್ ಸೋಂಕು ದೃಢವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಕ್ರೀಡಾ ಗ್ರಾಮದಲ್ಲಿ ಸೋಂಕು ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೋಕಿಯೋ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮತ್ತೋರ್ವ ಕ್ರೀಡಾಪಟುವಿಗೂ ಕೋವಿಡ್ ಸೋಂಕು ದೃಢವಾಗಿದೆ. ಆದರೆ ಆತ ಕ್ರೀಡಾ ಗ್ರಾಮ ಪ್ರವೇಶಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಒಲಿಂಪಿಕ್ಸ್ ಸಂಘಟಕರು ಶನಿವಾರ ಕ್ರೀಡಾಪಟುಗಳ ಹಳ್ಳಿಯಲ್ಲಿ ಕೋವಿಡ್ -19 ರ ಮೊದಲ ಪ್ರಕರಣವನ್ನು ವರದಿ ಮಾಡಿದ್ದಾರೆ. ಮುಂದಿನ ವಾರ ಪ್ರಾರಂಭವಾಗುವ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 14 ಹೊಸ ಪ್ರಕರಣಗಳು ಪತ್ತೆಯಾಗಿದ್ದು, “ಸುರಕ್ಷಿತ ಒಲಿಂಪಿಕ್’ ನ ಭರವಸೆಗಳ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.

ಆಳ್ವಾಸ್‌ನ ಇಬ್ಬರು ಕ್ರೀಡಾ ವಿದ್ಯಾರ್ಥಿಗಳು ಟೋಕಿಯೋ ಒಲಿಂಪಿಕ್ಸ್‌ಗೆ ಆಯ್ಕೆ | ತಲಾ 1 ಲಕ್ಷ ರೂಪಾಯಿ ನೀಡಿದ ಡಾ. ಆಳ್ವ

ಹತ್ತಾರು ತಲ್ಲಣಗಳ ನಡುವೆ ಒಲಿಂಪಿಕ್ಸ್‌ಗೆ ಸಿದ್ಧವಾಗಿದೆ ಟೋಕಿಯೊ
ದಕ್ಷಿಣ ಕೊರಿಯಾದ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರೊಬ್ಬರು ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಟೋಕಿಯೊಗೆ ಆಗಮಿಸಿದ ನಂತರ ಅವರಿಗೆ ಕೋವಿಡ್ ವೈರಸ್ ತಾಗಿರುವುದು ಪತ್ತೆಯಾಗಿದೆ. ನಂತರ ಅವರನನ್ನು ಐಸೋಲೇಟ್ ಮಾಡಲಾಗಿದೆ.

LEAVE A REPLY

Please enter your comment!
Please enter your name here