ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಬಂಧನ

0
293
Tap to know MORE!

ವರದಿ: ಸಿದ್ಧಾರ್ಥ್ ಎಸ್.

ಚಂಡೀಘಡ: 23 ವರ್ಷದ ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್ ಕುಮಾರ್ ಅವರನ್ನು ಅಂತಿಮವಾಗಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಸುಶೀಲ್ ಕುಮಾರ್​ಗೆ ಪಂಜಾಬ್ನಲ್ಲಿ ದೆಹಲಿ ಪೊಲೀಸರು ಕೈಕೋಳ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಸುಶೀಲ್ ಕುಮಾರ್ ಮತ್ತು ಆತನ ಖಾಸಗಿ ಕಾರ್ಯದರ್ಶಿ ಅಜಯ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಸುಶೀಲ್ ಕುಮಾರ್ ಬಂಧನಕ್ಕಾಗಿ ದೆಹಲಿ ಪೊಲೀಸರು ಪಂಜಾಬ್ ಮತ್ತು ಹರಿಯಾಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು.

ಕೋವಿಡ್ ನಿಯಮ ಉಲ್ಲಂಘನೆಗಾಗಿ ಲಾಠಿ ಚಾರ್ಜ್; 17ರ ಬಾಲಕ ಸಾವು

ಮೃತ ಕುಸ್ತಿಪಟು ಸಾಗರ್ ರಾಣಾ ತನ್ನ ಸ್ನೇಹಿತರೊಂದಿಗೆ ಛತ್ರಸಾಲ್ ಕ್ರೀಡಾಂಗಣದ ಬಳಿಯ ಮಾಡೆಲ್ ಟೌನ್ ಪ್ರದೇಶದ ಮನೆಯಲ್ಲಿ ವಾಸಿಸುತ್ತಿದ್ದ. ಸ್ಥಳದ ವಿಚಾರವಾಗಿ ಕಳೆದ ಮಂಗಳವಾರ (ಮೇ 4) ಮಧ್ಯರಾತ್ರಿ ಎರಡು ಗುಂಪುಗಳ ನಡುವೆ ಜಗಳ ಮತ್ತು ಗುಂಡಿನ ಚಕಮಕಿಗೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಆ ಸಮಯದಲ್ಲಿ ಸುಶೀಲ್ ಕುಮಾರ್ ಕೂಡ ಹಾಜರಿದ್ದರು ಎಂದು ಸಂತ್ರಸ್ತರು ಹೇಳಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಗಾಯಗೊಂಡ ಕುಸ್ತಿಪಟುಗಳಲ್ಲಿ, ಸಾಗರ್ ರಾಣಾ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದರೆ, ಇತರರು ಗಾಯಗೊಂಡಿದ್ದಾರೆ. ಘಟನಾ ಸ್ಥಳದಿಂದ ಪೊಲೀಸರು ಸ್ಕಾರ್ಪಿಯೋ ಕಾರು ಮತ್ತು ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಲೈವ್ ಕಾರ್ಟ್ರಿಜ್ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ಕುಸ್ತಿಪಟುಗಳ ಗುಂಪು ಆಸ್ತಿಯ ಬಗ್ಗೆ ವಿವಾದ ಹುಟ್ಟು ಹಾಕಿತ್ತು ಎಂದು ತಿಳಿದುಬಂದಿದೆ.

ಸುಶೀಲ್ ಕುಮಾರ್ ಯಾರು?

ಎರಡು ವೈಯಕ್ತಿಕ ಒಲಿಂಪಿಕ್ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಕ್ರೀಡಾಪಟು ಸುಶೀಲ್ ಕುಮಾರ್. 37 ವರ್ಷದ ಸುಶೀಲ್ ಕುಮಾರ್ ಅವರು 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಮತ್ತು 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2008 ರಲ್ಲಿ ಸುಶೀಲ್ ಕುಮಾರ್ ಅವರು ಗೆದ್ದ ಪದಕವು ಖಶಾಬಾ ಜಾಧವ್ ನಂತರ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಭಾರತ ಗೆದ್ದ ಎರಡನೇ ಪದಕವಾಗಿದೆ. ಅವರಿಗೆ 2009 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲಾಯಿತು.

LEAVE A REPLY

Please enter your comment!
Please enter your name here