ಒ ರಕ್ತದ ಗುಂಪಿನವರಿಗೆ ಸೋಂಕು ಸಾಧ್ಯತೆ ಕಡಿಮೆಯಂತೆ..!

0
1334

ಹೊಸದಿಲ್ಲಿ: ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯುವಲ್ಲಿ ಮಾನವನ ದೇಹದ ರಕ್ತದ ಗುಂಪು ಮುಖ್ಯ ಪಾತ್ರ ವಹಿಸುತ್ತದೆ ಎಂದು ಬ್ಲೂಮ್ಬರ್ಗ್ ‘ದಿ 23 ಆಂಡ್ ಮಿ’ ಎಂಬ ಅಧ್ಯಯನದಲ್ಲಿ ವರದಿ ಪ್ರಕಟವಾಗಿದೆ.

ಅಧ್ಯಯನ ಆರಂಭಿಸಿದ ಸಂಶೋಧಕರು ಸುಮಾರು 10,000 ಸೋಂಕಿತರ ಮಾಹಿತಿಯನ್ನು ಕಲೆ ಹಾಕಿ ಅದರಂತೆ ಇತರೆ ರಕ್ತದ ಗುಂಪಿಗೆ ಹೋಲಿಸಿದರೆ ‘ಒ’ ಗುಂಪಿನ ರಕ್ತ ಹೊಂದಿರುವವರಿಗೆ ಸೋಂಕು ತಗಲುವ ಸಾಧ್ಯತೆ ಶೇ. 18ರಷ್ಟು ಕಡಿಮೆ ಎಂದು ಉಲ್ಲೇಖಿಸಿದ್ದಾರೆ. ಇದೇ ವೇಳೆ ಸುಮಾರು 7.50ಲಕ್ಷ ಸೋಂಕಿತರ ಪರೀಕ್ಷೆ ಫಲಿತಾಂಶಗಳ ಪ್ರಕಾರ ‘ಒ’ ಗುಂಪಿನ ರಕ್ತವು ವೈರಾಣುವಿನಿಂದ ದೇಹಕ್ಕೆ ಸುರಕ್ಷತೆ ಒದಗಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here