ದೇವರ ನಾಡಿನ ನಾಡ ಹಬ್ಬದ ಸಡಗರ
ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಚಿತ್ತಾರ
ಬಗೆ ಬಗೆಯ ಔತಣಕೂಟ ಸವಿಯುವ ಕಾತುರ
ನಾಡ ಬೆಳಗಲು ಬಂದಿಯೇ ಬಿಟ್ಟ ಮಾವೇಲಿ ಸಾಹುಕಾರ
ಪೂಕಳಂ ನೋಡುವ ಕಣ್ಣಿಗೆ ಎಷ್ಟು ತಂಪು
ನಾಡಿನಾದ್ಯಂತ ಹರಡಲು ಈ ಸೊಬಗಿನ ಕಂಪು
ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮದ ಹೋರಣ
ಎಲ್ಲೆಲ್ಲಿಯೂ ಕಾಣುವುದು ಸಂಭ್ರಮದ ತೋರಣ
ಮರಳಿ ಬಂದೇ ಬಿಟ್ಟಿತು ನಾಡ ಉತ್ಸವ
ಗಲ್ಲಿ ಗಲ್ಲಿಯಲ್ಲೂ ಮೂಡಿತು ಹಬ್ಬದ ಕಲರವ
ಪ್ರಪಂಚದಲ್ಲೆಡೆ ಬಹಳ ಸಂಭ್ರಮದಿ ಆಚರಿಸುವರು
ಪ್ರೀತಿಯ ಮಾವೇಲಿಯ ಭಕ್ತಿಯಿಂದ ಸ್ವಾಗತಿಸುವರು
-ಗಿರೀಶ್ ಪಿ.ಎಂ
ವಿವಿ ಕಾಲೇಜು, ಮಂಗಳೂರು