ನಾನೂ ಕೂಡ ಡ್ರಗ್ ಅಡಿಕ್ಟ್ ಆಗಿದ್ದೆ : ಕಂಗನಾ ರನೌತ್ ಹಳೇ ವೀಡಿಯೋ ವೈರಲ್!

0
262
Tap to know MORE!

ಕಳೆದ ವಾರ ಮುಂಬೈಗೆ ಬಂದಾಗ ಕಂಗನಾ ರನೌತ್ ಭಾರೀ ಬಿರುಗಾಳಿಯನ್ನು ಎಬ್ಬಿಸಿದ್ದರು. ತನ್ನ ಕಚೇರಿಯನ್ನು ಹೊಡೆದು ಹಾಕಿರುವುದರ ಹೊರತಾಗಿ, ನಟಿ ಬಾಲಿವುಡ್‌ನಲ್ಲಿ ಮಾದಕ ದ್ರವ್ಯ ಸೇವನೆಯ ಬಗ್ಗೆಯೂ ಧ್ವನಿ ಎತ್ತಿದ್ದಾರೆ. ರಣವೀರ್ ಸಿಂಗ್, ವಿಕ್ಕಿ ಕೌಶಲ್ ಮತ್ತು ರಣಬೀರ್ ಕಪೂರ್ ಅವರಂತಹ ನಟರನ್ನು ಪರೀಕ್ಷೆಗೆ ಒಳಪಡಿಸುವಂತೆ ಅವರು ಒತ್ತಾಯಿಸಿದ್ದಾರೆ.

ಈ ನಡುವೆ, ಮಾರ್ಚ್ 2020 ರಲ್ಲಿ ನಟಿಯು ಹಂಚಿಕೊಂಡಿದ್ದ ಹಳೆಯ ವಿಡಿಯೋ ಒಂದು ಈಗ ಮತ್ತೆ ಸದ್ದು ಮಾಡುತ್ತಿದೆ. ವೀಡಿಯೊದಲ್ಲಿ, ನಟಿಯು ತಾನು ಮಾದಕ ವ್ಯಸನಿ ಎಂದು ಒಪ್ಪಿಕೊಂಡಿದ್ದರು.

 

ಕಂಗನಾ ಅವರ ಮಾದಕ ದ್ರವ್ಯ ಸಂಪರ್ಕದ ಬಗ್ಗೆ ತನಿಖೆ ಆರಂಭಿಸಲು ಮುಂಬೈ ಪೊಲೀಸ್ ಕಚೇರಿಗೆ ಆದೇಶ ಬಂದಿರುವುದರಿಂದಾಗಿ, ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಹಲವಾರು ನೆಟ್ಟಿಗರು #arrestkangana ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೇಳುತ್ತಿದ್ದಾರೆ.

ಲಾಕ್ ಡೌನ್ ಸಂದರ್ಭ, ಮಾರ್ಚ್ ತಿಂಗಳಲ್ಲಿ, ಮನಾಲಿಯಲ್ಲಿರುವ ತನ್ನ ಮನೆಯಲ್ಲಿದ್ದಾಗ ಒಂದು ವಿಡಿಯೋವನ್ನು ಕಂಗನಾ ಅವರ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ವೀಡಿಯೊದಲ್ಲಿ, ” ನಾನು ನನ್ನ ಮನೆಯಿಂದ ಓಡಿಹೋದ ಬಳಿಕ, ಒಂದೆರಡು ವರ್ಷಗಳಲ್ಲಿ ಚಲನಚಿತ್ರದ ತಾರೆಯಾಗಿದ್ದೇನೆ. ಹಾಗೆಯೇ, ಮಾದಕ ವ್ಯಸನಿಯೂ ಆಗಿದ್ದೇನೆ. ನನ್ನ ಜೀವನದಲ್ಲಿ ತುಂಬಾ ವಿಷಯಗಳು ನಡೆಯುತ್ತಿವೆ. ನಾನು ಅಂತಹವರ ಕೈಗೆ ಸಿಲುಕಿದ್ದೇನೆ. ಇವೆಲ್ಲವೂ ನಾನು ಹದಿಹರೆಯದವನಾಗಿದ್ದಾಗ ಸಂಭವಿಸಿದೆ. ನಾನು ಎಷ್ಟು ಅಪಾಯಕಾರಿ ಎಂದು ನೀವೇ ಊಹಿಸಿ” ಎಂದು ನಟಿ ಹೇಳಿದ್ದರು.

LEAVE A REPLY

Please enter your comment!
Please enter your name here