ಮುಂಬೈಯಲ್ಲಿರುವ ಕಂಗನಾ ಕಛೇರಿ ನೆಲಸಮ – ಬಾಬರ್ ಮತ್ತು ಅವನ ಸೈನ್ಯ ಎಂದ ನಟಿ!

0
229
Tap to know MORE!

ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ನೆಲಸಮ ಮಾಡುತ್ತಿದ್ದಾರೆ. ಕಂಗನಾ ರಣಾವತ್ ಅಕ್ರಮವಾಗಿ ಕಚೇರಿ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಮುಂಬೈ ಪಾಲಿಕೆ ಇಂದು ಕಟ್ಟಡ ನೆಲಸಮ ಮಾಡುತ್ತಿದೆ.

ಹಿಮಾಚಲ ಪ್ರದೇಶದಿಂದ ಮುಂಬೈಗೆ ಆಗಮಿಸುತ್ತಿರುವ ನಟಿ ಕಂಗನಾ ಟ್ವಿಟ್ಟರ್ ಮೂಲಕ ಮುಂಬೈ ಪಾಲಿಕೆಯ ನಡೆಯನ್ನು ಖಂಡಿಸಿದ್ದಾರೆ. ತನ್ನ ಕಚೇರಿಯನ್ನು ನೆಲಸಮ ಮಾಡುತ್ತಿರುವ ಫೋಟೋ ಹಂಚಿಕೊಂಡಿರುವ ನಟಿ ‘ಇದು ಪ್ರಜಾಪ್ರಭುತ್ವ ಸಾವು’ ಎಂದು ಟೀಕಿಸಿದ್ದಾರೆ. ‘ಇದು ಮುಂಬೈ ಅಲ್ಲ, ಪಾಕಿಸ್ತಾನ ಹಾಗೂ ಬಾಬರ್ ಸಾಮ್ರಾಜ್ಯ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಮಧ್ಯೆ, ನಟಿಯ ಆಸ್ತಿಯನ್ನು ಬಿಎಂಸಿ ಉರುಳಿಸಿರುವುದರ ವಿರುದ್ಧ ಕಂಗನಾ ರನೌತ್ ಅವರ ವಕೀಲರು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here