ಕಂಗನಾ ರನೌತ್‌ಗೆ Y ಸೆಕ್ಯೂರಿಟಿ ನೀಡಲು ಗೃಹ ಸಚಿವಾಲಯ ಒಪ್ಪಿಗೆ!

0
230
Tap to know MORE!

ಶಿವಸೇನೆ ಸಂಸದ ಸಂಜಯ್ ರಾವತ್ ಅವರೊಂದಿಗೆ ಇತ್ತೀಚೆಗೆ ನಡೆದ ವಾಗ್ಯುಧ್ದದ ಹಿನ್ನೆಲೆಯಲ್ಲಿ ಕಂಗನಾ ರನೌತ್ ಅವರಿಗೆ ಗೃಹ ಸಚಿವಾಲಯ ವೈ ಭದ್ರತೆ ನೀಡಲು ಒಪ್ಪಿದೆ ಎಂದು ವರದಿಯಾಗಿದೆ.

ತನ್ನ ಮತ್ತು ತಮ್ಮ ಮಗಳ ಸುರಕ್ಷತೆಗಾಗಿ ಭದ್ರತೆ ಒದಗಿಸುವಂತೆ, ಕಂಗನ್ ಅವರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್‌ಗೆ ರನೌತ್ ತಂದೆ ಪತ್ರ ಬರೆದ ಬಳಿಕ ಈ ಬೆಳವಣಿಗೆ ನಡೆದಿದೆ.

ವೈ ಭದ್ರತೆಯಡಿಯಲ್ಲಿ, 1 ಅಥವಾ 2 ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಸೇರಿದಂತೆ 11 ಮಂದಿ ಭದ್ರತಾ ಸಿಬ್ಬಂದಿಗಳು ಇರುತ್ತಾರೆ.

“ಕಂಗನಾ ರನೌತ್ ಅವರ ತಂದೆ ಪೊಲೀಸ್ ರಕ್ಷಣೆ ಕೋರಿ ಲಿಖಿತವಾಗಿ ನಮಗೆ ಪತ್ರ ನೀಡಿದ್ದಾರೆ. ನಾನು ನಿನ್ನೆ ಅವರ ಸಹೋದರಿಯೊಂದಿಗೆ ಮಾತನಾಡಿದ್ದೇನೆ. ಈ ನಿಟ್ಟಿನಲ್ಲಿ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ ಮತ್ತು ಅವರಿಗೆ ಇಲ್ಲಿ ಭದ್ರತೆ ನೀಡಲಾಗುವುದು. ಒದಗಿಸಲು ಏನು ಮಾಡಬಹುದೆಂದು ನಾವು ಚರ್ಚಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಹೇಳಿದ್ದರು.

LEAVE A REPLY

Please enter your comment!
Please enter your name here