ಪಕ್ಷಿಕೆರೆ: ದಿನಾಂಕ 13/12/2020 ರಂದು ಶ್ರೀ ವಿನಾಯಕ ಮಿತ್ರ ಮಂಡಳಿ(ರಿ) ಪಕ್ಷಿಕೆರೆ ಇದರ ನೇತೃತ್ವದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪಡುಪಣಂಬೂರು ಗ್ರಾಮ ಪಂಚಾಯತ್ ಇದರ ಸಂಯುಕ್ತ ಆಶ್ರಯದಲ್ಲಿ 10ನೇ ತೋಕೂರು ಗ್ರಾಮದ ಕಜೇರಿ ಗುತ್ತು ಬಳಿ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕುವ ಕಾರ್ಯ ನಡೆಯಿತು.
ಇದನ್ನೂ ಓದಿ: ಮುಲ್ಕಿ: ತೋಕೂರು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಹರಿದಾಸ ಭಟ್ ಆಯ್ಕೆ
ಈ ಶ್ರಮದಾನದಲ್ಲಿ ಪಡುಪಣಂಬೂರು ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ದಿನೇಶ್, ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ಶೆಟ್ಟಿಗಾರ್, ಜೊತೆ ಕಾರ್ಯದರ್ಶಿಯಾದ ಶ್ರೀ ಸುಭಾಶ್ ಹಾಗೂ ಸದಸ್ಯರು ಭಾಗವಹಿಸಿದರು.
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ