ತೋಕೂರು: ಸ್ಪೋರ್ಟ್ಸ್ ಕ್ಲಬ್‌ನ ಮಹಿಳಾ ಸದಸ್ಯೆಯರಿಂದ ಗದ್ದೆಯಲ್ಲಿ ಫಸಲು ಕಟಾವು

0
101

ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ)ತೋಕೂರು,ಹಳೆಯಂಗಡಿ ಇದರ ಆಶ್ರಯದಲ್ಲಿ, ಸ್ವಚ್ಛ ಭಾರತ ಅಭಿಯಾನದ ಮುಂದುವರಿದ ಭಾಗವಾಗಿ, ಕ್ಲಬ್‌ನ ಸದಸ್ಯೆಯರು ಫಸಲನ್ನು ಕಟಾವು ಮಾಡಿ ಕೊಟ್ಟಿದ್ದಾರೆ.

ತೋಕೂರು “ಸಂಕೇಶ ಮನೆ” ದಿ| ಕೃಷ್ಣ ಶೆಟ್ಟಿಯವರ ಪಾಳು ಬಿದ್ದ ಗದ್ದೆಯನ್ನು ಸಂಸ್ಥೆಯ ಸದಸ್ಯರಾದ ಶ್ರೀ ಕೇಶವ ದೇವಾಡಿಗ ಇವರು ಕೊರೋನಾ ಸಂಕಷ್ಟ ಹಿನ್ನೆಲೆ ಉದ್ಯೋಗವಿಲ್ಲದೆ ಪರದಾಡುತ್ತಿದ್ದ ಸಂದರ್ಭದ 3 ತಿಂಗಳ ಹಿಂದೆ ಉಳುಮೆ ಮಾಡಿ ನಾಟಿ ಕಾರ್ಯ ಮುಗಿಸಿರುತ್ತಾರೆ.

ನಾಟಿ ಮಾಡಿದ ಪೈರು,ಬೆಳೆದು ಕಟಾವಿಗೆ ಸಿದ್ದಗೊಂಡಿರುವ ಈ ಸಂದರ್ಭದಲ್ಲಿ ಅ.28ರ ಬುಧವಾರ ಸಂಸ್ಥೆಯ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಪ್ರಮೀಳ ಕೇಶವ ದೇವಾಡಿಗ ಇವರ ಮುಂದಾಳ್ವತದಲ್ಲಿ ಮಹಿಳಾ ಸದಸ್ಯೆಯರು ಗದ್ದೆಗಿಳಿದು ಫಸಲನ್ನು ಕಟಾವು ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಶ್ರೀ ಮೋಹನ್ ದಾಸ್,ಸಂಸ್ಥೆಯ ಉಪಾಧ್ಯಕ್ಷ ಶ್ರೀ ದೀಪಕ್ ಸುವರ್ಣ, ಮಹಿಳಾ ಸಮಿತಿ ಕಾರ್ಯಧ್ಯಕ್ಷೆ ಶ್ರೀಮತಿ ವಾಣಿ ಮಹೇಶ್,ಜೊತೆ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಕುಲಾಲ್, ಇನ್ನಿತರ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here