ಶ್ರೀಕ್ಷೇತ್ರ ಕಟೀಲಿನ 17 ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನೂ ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಹಾಗೆಯೇ, ದೇವಸ್ಥಾನವನ್ನು ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಲಾಗಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಪ್ರಕಟಣೆ ತಿಳಿಸಿದೆ
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎಲ್ಲಾ ಅರ್ಚಕರಿಗೆ ಹಾಗೂ ಸಿಬ್ಬಂದಿಗಳಿಗೆ ಸರಕಾರದ ವತಿಯಿಂದ ರ್ಯಾಂಡಮ್ ಟೆಸ್ಟ್ ಮಾಡಲಾಗಿತ್ತು. ಶ್ರೀದೇವಿಯ ಕೃಪೆಯಿಂದ ಎಲ್ಲ ಅರ್ಚಕರಿಗೆ ಹಾಗೂ ಒಳನೌಕರರ ಕೊರೋನಾ ವರದಿಯು ನೆಗೆಟಿವ್ ಬಂದಿದೆ. ಆದರೆ, ಸುಮಾರು 17 ಹೊರನೌಕರರಿಗೆ ಹಾಗೂ ಸಹಾಯಕರಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ, ಕೊರೊನಾ ವರದಿಯು ಪಾಸಿಟಿವ್ ಬಂದಿರುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ನೋಡಿ : ಶ್ರೀ ಕ್ಷೇತ್ರ ಕಟೀಲಿನ 17 ಸಿಬ್ಬಂದಿಗಳಿಗೆ ಕೊರೋನಾ!
“ಅವರೆಲ್ಲರೂ ಈಗ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಹಾಗೆಯೇ ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನದ ಒಳ ಮತ್ತು ಹೊರ ವಠಾರವನ್ನು ಸ್ಯಾನಿಟೈಜ್ ಮಾಡಿದ್ದು, ಭಕ್ತಾದಿಗಳ ಪ್ರವೇಶಕ್ಕೆ ಯಾವುದೇ ನಿರ್ಬಂಧವಿಲ್ಲ. ಕಟೀಲು ದೇವಸ್ಥಾನವು ಸೀಲ್ಡೌನ್ ಮಾಡಲಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.