ಕಟೀಲು : ಕೊರೊನಾ ಲಾಕ್ಡೌನ್ ನಿಂದಾಗಿ ಮುಚ್ಚಲ್ಪಟ್ಟಿದ್ದ ದೇವಾಲಯಗಳನ್ನು ತೆರೆದು ಭಕ್ತರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಅದರ ಪರಿಣಾಮ ಎಂಬಂತೆ ಮಂಗಳೂರಿನ ಕಟೀಲಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಸಿಬ್ಬಂದಿಗಳಲ್ಲಿ ಕೊರೊನಾ ಕಾಣಿಸಿಕೊಂಡಿದೆ.
ಕಟೀಲು ದೇವಳದಲ್ಲಿ ನಡೆದ ರಾಂಡಮ್ ಟೆಸ್ಟ್ ನಲ್ಲಿ 47 ವರ್ಷ, 25 ವರ್ಷ, 45, 25, 31, 57, 50, 50, 38, 30, 68, 48, 58, 53, 26 ಮತ್ತು 59 ವರ್ಷದ ಪುರುಷರು ಮತ್ತು 30 ವರ್ಷದ ಮಹಿಳೆ ಸೇರಿದಂತೆ 17 ಮಂದಿಗೆ ಕೊರೋನಾ ಪೊಸಿಟಿವ್ ಕಂಡು ಬಂದಿದೆ.
ಇದನ್ನೂ ನೋಡಿ : ಶ್ರೀ ಕ್ಷೇತ್ರ ಕಟೀಲು – ಕೊರೋನಾ ಹಿನ್ನೆಲೆಯಲ್ಲಿ ದೇಗುಲ ಸ್ಯಾನಿಟೈಜ್ – ಭಕ್ತರ ಪ್ರವೇಶಕ್ಕೆ ಯಾವುದೇ ನಿರ್ಬಂಧವಿಲ್ಲ
ದೇವಾಲಯದ ಒಟ್ಟು 17 ಸಿಬ್ಬಂದಿಗೆ ಕೊರೊನಾ ತಗುಲಿರುವುದರಿಂದ ದೇವಾಲಯವನ್ನು ಮುಂಜಾಗ್ರತಾ ಕ್ರಮವಾಗಿ ಸೀಲ್ ಡೌನ್ ಮಾಡಲಾಗಿದೆ. ಸ್ವಚ್ಛತಾ ಕಾರ್ಯಗಳನ್ನು ಈಗಾಗಲೇ ನಡೆಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.