ಕಣ್ಣಿನ ಶುಷ್ಕತೆ

0
4177
Tap to know MORE!

ಕಣ್ಣು ಇಡೀ ಜಗತ್ತಿನ ಸೌಂದರ್ಯವನ್ನು ಪರಿಚಯಿಸುತ್ತದೆ. ವಿಧವಿಧವಾದ ಬಣ್ಣವನ್ನು ಬಣ್ಣಿಸುವುದು ಈ ಕಣ್ಣಿನಿಂದಲೇ.ಇಂತಹ ಕಣ್ಣಿನ ಕಾಳಜಿ ಬಹಳ ಮುಖ್ಯವಾಗಿದೆ.ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಿಂದ ಹಿಡಿದು ಯುವ ಪೀಳಿಗೆವರೆಗೂ ಕಾಡುತ್ತಿರುವ ಸಮಸ್ಯೆ ಕಣ್ಣಿನ ಶುಷ್ಕತೆ(eye dryness).
ಕಣ್ಣಿನ ವ್ಯಾಯಾಮ ಮಾಡುವುದರಿಂದ ಕಡಿಮೆಗೊಳಿಸಬಹುದು .ಈ ಸಮಸ್ಯೆಗೆ ಕೆಲವು ಮನೆಮದ್ದು ಇಂತಿವೆ.

  • ಈಗಿನ ದಿನಗಳಲ್ಲಿ ಮೊಬೈಲ್ ಫೋನ್ಗಳ ಬಳಕೆ ಹಾಗೂ ದೂರದರ್ಶನದ ವೀಕ್ಷಣೆ, ಕಂಪ್ಯೂಟರ್(ಗಣಕ ಯಂತ್ರ)ನ ಅತಿಯಾಗಿ ನೋಡುವುದರಿಂದ ಹಾಗೆಯೇ ಕೆಲವು ವಾತಾವರಣದ ಅಂಶ(ಅತೀ ಶೀತಲ ಹಾಗೂ ಶುಷ್ಕತೆ ಇರುವ ಪ್ರದೇಶದಲ್ಲಿ ) ಕಣ್ಣಿನ ತೇವಾಂಶವನ್ನು ಕಡಿಮೆ ಮಾಡುತ್ತದೆ.
    ಪರಿಹಾರಗಳು:
    ಕಣ್ಣು ಮಿಟುಕಿಸುವುದು(blinking): ಕಣ್ಣನ್ನು ನಿರಂತರವಾಗಿ ತೆರೆದು , ಮುಚ್ಚುವುದರಿಂದ ಹಾಗೂ ಕನಿಷ್ಠ 10 ನಿಮಿಷಕ್ಕೊಮ್ಮೆ 10 ಸೆಕೆಂಡ್ ಗಳ ಕಾಲ ಕಣ್ಣು ಮುಚ್ಚುವುದರಿಂದ ತೇವಾಂಶವನ್ನು ಕಾಪಾಡಬಹುದು.
    ತ್ರಾಟಕ ಕ್ರಿಯೆ: ಕಣ್ಣನ್ನು ಎಡಭಾಗಕ್ಕೆ , ಹಾಗೂ ಬಲಭಾಗಕ್ಕೆ ಒಮ್ಮೆ ನೋಡುವುದರಿಂದ, ವೃತ್ತಾಕಾರದಲ್ಲಿ ಕಣ್ಣಿನ ಗುಡ್ಡೆಯನ್ನು ತಿರುಗಿಸಿವುದರಿಂದ, ಕಣ್ಣಿನ ದೃಷ್ಟಿಯನ್ನು ಮೂಗಿನ ತುದಿಗೆ ಹಾಗೂ ಹಣೆಯ ಮಧ್ಯೆ ಕೇಂದ್ರಿಕರಿಸುವುದರಿಂದ ದೃಷ್ಟಿಯು ವೃದ್ಧಿಸುತ್ತದೆ.
  • ಆಹಾರ ಕ್ರಮ: ದೇಹದಲ್ಲಿ ಉಷ್ಣತೆ ಅಧಿಕವಾದರೂ ಈ ಕಣ್ಣಿನ ಶುಷ್ಕತೆ ಪರಿಣಮಿಸುತ್ತದೆ. ಅಗಸೆ ಬೀಜ (flax seeds), walnut, ತಂಪಿನ ಬೀಜ (chia Seeds)ಗಳನ್ನು ನೀರಿನಲ್ಲಿ ನೆನೆ ಹಾಕಿ ಸೇವಿಸುವುದರಿಂದ ಕಣ್ಣಿನ ತೇವಾಂಶ ಅಧಿಕವಾಗುತ್ತದೆ.ಹಾಗೆಯೇ ನೀರಿನ ಸೇವನೆ ಅತಿ ಮುಖ್ಯ.
  • ಅತಿ ಮುಖ್ಯವಾದ ಅಂಶವೇನೆಂದರೆ ಸರಿಯಾದ ನಿದ್ದೆ ಇಲ್ಲದಿದ್ದರುವುದು . ಸಮಯಕ್ಕೆ ಸರಿಯಾಗಿ 7-8ಘಂಟೆಗಳ ಕಾಲ ನಿದ್ದೆಯನ್ನು ಚೆನ್ನಾಗಿ ಮಾಡುವುದರಿಂದ ಹಾಗೂ ಮಲಗುವ ಮುನ್ನ ಕಣ್ಣನ್ನು ತಣ್ಣೀರಿನಲ್ಲಿ ತೊಳೆಯುವುದರಿಂದ ಕಣ್ಣಿನ ಆರೋಗ್ಯವನ್ನು ಹೆಚ್ಚಿಸಬಹುದು.
  • ಕಣ್ಣಿನ ಉರಿಯುವಿಕೆ: ಉಗುರು ಬೆಚ್ಚಗಿನ ನೀರಿನಲ್ಲಿ ,ಹತ್ತಿ ಬಟ್ಟೆಯನ್ನು ನೆನಸಿ ಕಣ್ಣಿನ ಮೇಲೆ 5-10 ನಿಮಿಷಗಳ ಕಾಲ ಇಡುವುದರಿಂದ ಪರಿಹರಿಸಬಹುದು.

ಜಪ
ಕುಂದಾಪುರ

LEAVE A REPLY

Please enter your comment!
Please enter your name here