ಕದ್ರಿಕಂಬಳ ಜಂಕ್ಷನ್ ನಲ್ಲಿ ಅಪಘಾತ; ಕಾರಿನಡಿಗೆ ಸಿಲುಕಿದ ಯುವತಿ

0
85

ಮಂಗಳೂರಿನ ಕದ್ರಿ ಕಂಬಳ ಜಂಕ್ಷನ್ ನಲ್ಲಿ ಶುಕ್ರವಾರ ಯುವತಿಯೋರ್ವರು ಚಲಾಯಿಸುತ್ತಿದ್ದ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವತಿ ಕಾರಿನಡಿಯಲ್ಲಿ ಸಿಲುಕಿ ಗಾಯಗೊಂಡಿದ್ದಾರೆ. ಅಪಘಾತಕ್ಕೊಳಗಾದ ಯುವತಿ ಬಿ.ಸಿ.ರೋಡ್ ನ ವಾಣಿಶ್ರೀ ಎಂದು ತಿಳಿದುಬಂದಿದೆ.

ವಾಣಿಶ್ರೀ ಅವರು ಕೆ. ಪಿ.ಟಿ ಕಡೆಯಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ ಹೋಗುತ್ತಿದ್ದಾಗ ಕದ್ರಿ ದೇವಸ್ಥಾನ ರಸ್ತೆಯಿಂದ ಕೊಡಿಯಾಲ್ ಬೈಲ್ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಯುವತಿ ಕಾರಿನ ಮೇಲೆ ಬಿದ್ದು ಮುಂಭಾಗದಿಂದ ಕಾರಿನಡಿಗೆ ಸಿಲುಕಿದ್ದಾರೆ.

ಘಟನೆಯಿಂದ ಗಾಬರಿಗೊಂಡ ಕಾರು ಚಾಲಕ ಕಾರನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಯುವತಿಯ ದೇಹವು ಕಾರಿನ ಕೆಳಕ್ಕೆ ಹೋಗಿತ್ತು. ಕೂಡಲೇ ಸ್ಥಳೀಯರು ಕಾರನ್ನು ಮೇಲೆತ್ತಿ ಯುವತಿಯನ್ನು ರಕ್ಷಿಸಿದ್ದಾರೆ. ಘಟನೆ ನಡೆಯುವ ವೇಳೆ ಶಾಸಕ ಯು ಟಿ ಖಾದರ್ ಈ ದಾರಿಯಲ್ಲೇ ಸಂಚರಿಸುತ್ತಿದ್ದ ಕಾರಣ ಯುವತಿಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕದ್ರಿ ಕಂಬಳ ಜಂಕ್ಷನ್ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದು ಈ ಹಿಂದೆಯೂ ನಡೆದ ಒಂದು ಅಪಘಾತದಲ್ಲಿ ಓರ್ವ ಶಿಕ್ಷಕಿ ಮೃತಪಟ್ಟಿದ್ದರು.

LEAVE A REPLY

Please enter your comment!
Please enter your name here