ಉಡುಪಿ : “ಕನ್ನಡ ಕಡೆಗಣಿಸುವ ಪ್ರಶ್ನೆಯೇ ಇಲ್ಲ” – ಸ್ಪಷ್ಟನೆ ನೀಡಿದ ಶ್ರೀ ಕೃಷ್ಣ ಮಠ

0
132
Tap to know MORE!

ಉಡುಪಿ ಡಿ.2 ಶ್ರೀಕೃಷ್ಣಮಠದ ಮುಖ್ಯ ಪ್ರವೇಶದ್ವಾರದಲ್ಲಿ ಕನ್ನಡದ ನಾಮಫಲಕ ತೆಗೆದು ತುಳು ಮತ್ತು ಸಂಸ್ಕೃತದ ನಾಮಫಲಕ ಹಾಕಿದ್ದರ ಬಗ್ಗೆ ಉಡುಪಿಯಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗಿದೆ. ಹಲವಾರು ಸಂಘಟನೆಗಳ ಆಕ್ರೋಶದ ಬಳಿಕ ಉಡುಪಿ ಮಠದಿಂದ ಈ ಕುರಿತಂತೆ ಸ್ಪಷ್ಟನೆ ಬಂದಿದೆ

ಪ್ಲಾಸ್ಟಿಕ್ ನಿಷೇಧ ಆಗಿದ್ದರಿಂದ ಮರದ ಫಲಕವನ್ನು ಅಳವಡಿಸಲು ಮಠವು ನಿರ್ಧರಿಸಿದೆ. ಹೀಗಾಗಿ ಹಳೆಯ ಪ್ಲಾಸ್ಟಿಕ್ ಬೋರ್ಡ್ ಕಿತ್ತುಹಾಕಿ ಕನ್ನಡ, ತುಳು ಮತ್ತು ಸಂಸ್ಕೃತ ಭಾಷೆಯಲ್ಲಿ ಬೇರೆ ನಾಮಫಲಕ ಅಳವಡಿಸುವ ನಿರ್ಧಾರ ಮಾಡಲಾಗಿದೆ. ಮೊದಲ ಹಂತದಲ್ಲಿ ಸಂಸ್ಕೃತ ಮತ್ತು ತುಳುವಿನ ನಾಮಫಲಕ ಸಿದ್ಧಗೊಂಡಿತ್ತು. ಕನ್ನಡ ನಾಮಫಲಕದ ಮರದ ಕೆತ್ತನೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಕೃಷ್ಣಮಠದಲ್ಲಿ ಲಕ್ಷದೀಪೋತ್ಸವ ನಡೆಯುತ್ತಿರುವುದರಿಂದ ಮರದ ಕೆತ್ತನೆಯನ್ನು ಹೊಂದಿದ ಕನ್ನಡ ನಾಮಫಲಕವನ್ನು ಅಳವಡಿಸಲು ಸಾಧ್ಯವಾಗಿಲ್ಲ. ಸದ್ಯದಲ್ಲೇ ಕನ್ನಡ ನಾಮಫಲಕವನ್ನು ಕೂಡ ಅಳವಡಿಸಲಾಗುವುದು ಎಂದು ಮಠದ ಮೂಲಗಳು ಸ್ಪಷ್ಟಪಡಿಸಿವೆ.

ಇದನ್ನೂ ಓದಿ: ದುಗ್ಗಣ್ಣ ಸಾವಂತರ ದಾರ್ಶನಿಕ ವ್ಯಕ್ತಿತ್ವ ನಮಗೆಲ್ಲರಿಗೂ ಮಾದರಿ : ಸಂತೋಷ್ ದೇವಾಡಿಗ

ಈ ಸಂಬಂಧ ಮಾತನಾಡಿರುವ ಬೋರ್ಡ್ ಅಳವಡಿಕೆ ಉಸ್ತುವಾರಿ ಕಲಾವಿದ ಪುರುಷೋತ್ತಮ ಅಡ್ವೆ, ಹಳೆ ಬೋರ್ಡನ್ನು ತೆಗೆದಿದ್ದೇವೆ. ಕನ್ನಡದ ಮರದ ಬೋರ್ಡನ್ನು ಸದ್ಯದಲ್ಲಿ ಹಾಕಲಿದ್ದೇವೆ. ಮೊದಲ ಹಂತದಲ್ಲಿ ಸಂಸ್ಕೃತ ಮತ್ತು ತುಳು ಭಾಷೆಯ ಬೋರ್ಡ್ ಸಿದ್ಧಗೊಂಡಿದ್ದರಿಂದ ಅದನ್ನು ಅಳವಡಿಸಿದ್ದೇವೆ. ಕನ್ನಡವನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಮರದ ಕೆತ್ತನೆ ಕಾರ್ಯ ಪೂರ್ಣಗೊಂಡ ಬಳಿಕ ಕನ್ನಡ ಬೋರ್ಡನ್ನು ಅಳವಡಿಸುತ್ತೇವೆ ಎಂದಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕೆಲವೇ ದಿನಗಳಲ್ಲಿ ಕನ್ನಡ ಫಲಕ ಅಳವಡಿಸುವ ಭರವಸೆ
ರಾಜ್ಯಾದ್ಯಂತ ಕನ್ನಡಪರ ಹೋರಾಟಗಳು ನಡೆಯುತ್ತಿರುವ ಹೊತ್ತಿಗೆ ಮತ್ತು ಸರಕಾರ ಕೂಡ ಈಚೆಗೆ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ ಕೆಲವೇ ದಿನಗಳಲ್ಲಿ ನಡೆದ ಈ ಬೆಳವಣಿಗೆಯಿಂದ ಕನ್ನಡಾಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗುವುದು ಸಹಜ. ಇದೀಗ ಕೃಷ್ಣಮಠದ ಆಡಳಿತ ಮಂಡಳಿ ಜನರ ಆಕ್ರೋಶದಿಂದ ಎಚ್ಚೆತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಕನ್ನಡ ನಾಮಫಲಕ ಅಳವಡಿಸುವ ಭರವಸೆ ನೀಡಿದೆ.

LEAVE A REPLY

Please enter your comment!
Please enter your name here