ಆಶಯಗಳ ಹೊತ್ತ ಮನಸ್ಸು…
ಅವರಿಗಿನ್ನು ಚಿಕ್ಕ ವಯಸ್ಸು…
ದಿವ್ಯ ಸ್ವರೂಪಿಯ ನೆನೆಯುತ ಲೆ…
ಮೀನ, ಮೇಷ ಎಣಿಸದೆಲೆ..
ಶುರುವಾಯಿತು ಸಮೂಹ ವೊಂದು….
ಎಲ್ಲರ ಮನ ಗೆದ್ದ ವೇದಿಕೆ ಯೊಂದು….
ಸೇರಿದರು ಮಹಿಳೆಯರು ಸಮೂಹ ದೀ….
ಹಿತ ಶತ್ರುಗಳ ಚೆಲ್ಲಾಟದೀ
ಶುಭ ಹಾರೈಸಿದರು ಗಣ್ಯ ವ್ಯಕ್ತಿ ಯೋರ್ವರು….
ಅಡ್ಡ ಗಾಲಿತ್ತ ಅನ್ಯ ವ್ಯಕ್ತಿ ಯೋರ್ವರು….
ಜಿಲ್ಲಾ,ರಾಜ್ಯ ಮಟ್ಟದಲ್ಲಿ ಬೆಳಗಲೆಂದು….
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅರಳಲೆಂದು…..
ನಡೆಯಿತು ಮಾತಿನ ಚಕಮಕಿ…
ನಿರಪರಾದಿಗೆ ಬಂತೊಂದು ಕಪ್ಪು ಚುಕ್ಕಿ….
ಪ್ರಾರಂಭಗೊಂಡಿತು ಮತ್ತೊಂದು ಸಮೂಹ….
ಮಹಿಳೆಯರಿಗೆ ಅದರಲ್ಲಿ ವ್ಯಾಮೋಹ……
ಮಹಿಳೆಯರಿತ್ತರು ಸಂಗೀತ, ಚಿತ್ರ ಕಲೆ,ಅಡುಗೆ …..
ಅವರಿಗೆ ನೀಡಿತದು ಕೊಡುಗೆ…..
ಕೆಲವರು ಅದನು ಜರಿದರು..
ಹಲವರು ಅದರಿಂದ ದೂರ ಸರಿದರು….
ಅಹಂ , ಸ್ವಾರ್ಥ ತೊರೆದು ಪಡೆಯಬೇಕಿತ್ತು ಕೆಂಪು ಬಣ್ಣದ ಬೊಕ್ಕೆ….
ಆರೋಪ, ಕಿರುಕುಳ ನೀಡಿ ತಂದಿದೆ ಇಂದು ಅದು ಕಪ್ಪು ಬಣ್ಣದ ಚುಕ್ಕೆ…..
ಬರಹ: ಶ್ರೀಮತಿ ರೇಖಾ ಸುದೇಶ್ ರಾವ್
🙏🙏🚩🚩