ಹಲವು ‘ಪ್ರಥಮ’ಗಳಿಗೆ ಸಾಕ್ಷಿಯಾದ ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

0
164
Tap to know MORE!

ಅಮೇರಿಕಾದ ಉಪಾಧ್ಯಕ್ಷೆಯಾಗಿ ಆಯ್ಕೆ ಆಗುವ ಮೂಲಕ ಕಮಲಾ ಹ್ಯಾರಿಸ್ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಈ ಮೊದಲು ಅವರು ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋದ ಜಿಲ್ಲಾ ಅಟಾರ್ನಿ ಸ್ಥಾನವನ್ನು ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ ಏಕೈಕ ಮಹಿಳೆ ಕೂಡ.

ಕಮಲಾ ಹ್ಯಾರಿಸ್ ಅಮೆರಿಕದಲ್ಲಿನ ಮೊದಲ ಕಪ್ಪುವರ್ಣೀಯ, ಮೊದಲ ಭಾರತೀಯ ಅಮೆರಿಕನ್‌ ಹಾಗೂ ಮೊದಲ ದಕ್ಷಿಣ ಏಷ್ಯನ್‌ ಉಪಾಧ್ಯಕ್ಷೆಯಾಗಲಿದ್ದಾರೆ. ಅಲ್ಲದೇ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿಯೂ ದಾಖಲೆ ಬರೆಯಲಿದ್ದಾರೆ.

ಟ್ರಂಪ್‌ಗೆ ಮುಖಭಂಗ – ಜೋ ಬಿಡೆನ್ ಅಮೇರಿಕಾದ ನೂತನ ಅಧ್ಯಕ್ಷ

ಕಮಲಾ ಹ್ಯಾರಿಸ್ ಅಕ್ಟೋಬರ್ 20, 1964 ರಂದು ಆಕ್ಲೆಂಡ್ ನಲ್ಲಿ ಜನಿಸಿದರು. ತಾಯಿ ತಮಿಳುನಾಡಿನ ಸಾಂಪ್ರದಾಯಿಕ ಕುಟುಂಬಕ್ಕೆ ಸೇರಿದವರು. ತಂದೆ ಜಮೈಕಾದವರು.

ಕಮಲಾ ವಾಷಿಂಗ್ಟನ್ ಡಿ.ಸಿ ಯ ಹೊವಾರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. ಯುಸಿ ಹೇಸ್ಟಿಂಗ್ಸ್ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪೂರೈಸಿದರು.

ಅಲ್ಮೇಡಾ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿಯಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿದರು. ಪ್ರಮುಖವಾಗಿ ಅಪ್ರಾಪ್ತ ವಯಸ್ಕರ ವಿರುದ್ಧದ ಹಿಂಸಾಚಾರದ ಪ್ರಕರಣಗಳನ್ನು ತನಿಖೆ ಮಾಡಿದರು.

ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸುತ್ತಿರುವಾಗ ಬರಾಕ್ ಒಬಾಮ ಅವರನ್ನು ಡೆಮಾಕ್ರಟಿಕ್ ಪಕ್ಷಕ್ಕೆ ಸೇರಿಸಿಕೊಂಡರು. ಕ್ಯಾಲಿಫೋರ್ನಿಯಾದ ಸೆನೆಟರ್ ಆಗಿ ಚುನಾಯಿತರಾದರು.

ಕೆಲವು ವಿಚಾರಗಳಲ್ಲಿ ಕಮಲಾ ಬಗ್ಗೆ ಭಾರತೀಯ ಅಮೆರಿಕನ್ನರಿಗೆ ಅಸಮಧಾನವೂ ಇದೆ. ಮೊದಲಿನಿಂದಲೂ ಕಮಲಾ ತಮ್ಮನ್ನು ಕಪ್ಪುವರ್ಣೀಯ ಮಹಿಳೆ ಎಂದೇ ಗುರುತಿಸಿಕೊಳ್ಳಲು ಇಷ್ಟಪಡುತ್ತಿದ್ದರು, ಆದರೆ ಚುನಾವಣೆ ಎದುರಾದದ್ದೇ ಅವರು ತಮ್ಮ ಭಾರತೀಯ ಮೂಲವನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ. ಇನ್ನು ಜಮ್ಮು-ಕಾಶ್ಮೀರದ ವಿಚಾರದಲ್ಲಿ ಕಮಲಾ ಹ್ಯಾರಿಸ್‌ ಪಾಕಿಸ್ಥಾನ ಪರ ಲಾಬಿಗಳ ಮಾತು ಕೇಳಿಕೊಂಡು ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಬಂದವರು ಎನ್ನುವುದು ಟೀಕಾಕಾರರವಾದ.

LEAVE A REPLY

Please enter your comment!
Please enter your name here