ಕರ್ನಾಟಕದ ‘ಸಿಂಘಮ್’ ಎಂದು ಕರೆಯಲ್ಪಡುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕುಪ್ಪುಸಾಮಿ, ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದರು.
ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ ಮುರಳೀಧರ್ ರಾವ್ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಅವರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರಿದರು.
Former IPS officer K. Annamalai joins BJP in presence of Shri @PMuralidharRao and Shri @Murugan_TNBJP at BJP headquarters in New Delhi. pic.twitter.com/42HIh2TqWl
— BJP (@BJP4India) August 25, 2020
ತಮಿಳುನಾಡು ಮೂಲದ ಅಣ್ಣಾಮಲೈ ಕುಪ್ಪುಸಾಮಿ ಕರ್ನಾಟಕದಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರು 2019 ರಲ್ಲಿ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ್ದರು.
ಇದೀಗ ಒಂದು ವರ್ಷದ ಬಳಿಕ, ಅಣ್ಣಾಮಲೈ ಅವರು ತಮಿಳುನಾಡು ರಾಜಕೀಯಕ್ಕೆ ಪ್ರವೇಶಿಸುವುದಾಗಿ ಫೇಸ್ಬುಕ್ ಲೈವ್ ಮೂಲಕ ಘೋಷಿಸಿದ್ದರು ಮತ್ತು ರಾಜ್ಯದಲ್ಲಿ 2021 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಲಿದ್ದಾರೆ.
ಚಿಕ್ಕಮಗಳೂರಿನ ಬಾಬ ಬುಡಂಗಿರಿಯಲ್ಲಿ ನಡೆದ 2017 ರ ಗಲಭೆಗಳನ್ನು ನಿಭಾಯಿಸಿದ ನಂತರ ಮತ್ತು ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಅಪರಾಧಿಗಳು ಮತ್ತು ಕೋಮುವಾದಿ ಘಟನೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರಿಂದ ಅಣ್ಣಾಮಲೈ, ಬಹಳ ಖ್ಯಾತಿಯನ್ನು ಗಳಿಸಿದರು.