8ನೇ ವಯಸ್ಸಿನಲ್ಲೇ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದ ರಾಷ್ಟ್ರೀಯ ಚಾಂಪಿಯನ್ ಚಿರಾಗ್

0
239
Tap to know MORE!

ಪ್ರತಿಭೆ ಎಂಬುವುದು ಯಾರಲ್ಲಿ ಹೇಗೆ ಅಡಕವಾಗಿರುತ್ತದೆ ಎಂದು ಊಹಿಸಲೂ ಅಸಾಧ್ಯ. ಮಾರ್ಗದರ್ಶನ ನೀಡಲು ಒಬ್ಬ ಸೂಕ್ತ ಗುರು ಸಿಕ್ಕರೆ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ ಎಂದು ತೋರಿಸಿಕೊಟ್ಟವರು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ, ಅತ್ಯಂತ ಕಿರಿಯ ವಯಸ್ಸಿನಲ್ಲೇ ಬ್ಲ್ಯಾಕ್ ಬೆಲ್ಟ್ ಪಡೆದ ರಾಷ್ಟ್ರೀಯ ಚಾಂಪಿಯನ್ ಚಿರಾಗ್ ಎಸ್.ಆರ್.

ಕೊಡಗು ಜಿಲ್ಲೆಯ ಕುಶಾಲನಗರದ ಕರಾಟೆಪಟು ಚಿರಾಗ್, ಶಿವರಾಮ್ ಎಂ.ಕೆ ಹಾಗೂ ರಾಜೇಶ್ವರಿ ಪಿ.ಎಸ್ ದಂಪತಿಯ ಪುತ್ರ. ಪ್ರಸ್ತುತ ಫಾತಿಮಾ ಕಾನ್ವೆಂಟ್ ಶಾಲೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿಯಾಗಿರುವ ಇವರು, ಶಿಕ್ಷಣದ ಜೊತೆ ಜೊತೆಗೆ, ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ನಾಲ್ಕನೇ ವಯಸ್ಸಿನಲ್ಲಿರುವಾಗಲೇ ಇವರು ಯೋಗ ಹಾಗೂ ಕರಾಟೆ ತರಬೇತಿ ಪಡೆಯಲು ಆರಂಭಿಸಿದರು. ಕೆಲ ವರ್ಷಗಳಲ್ಲೇ ಜಿಲ್ಲಾ ಮಟ್ಟದ ಪಂದ್ಯಾಕೂಟದಲ್ಲಿ ಭಾಗವಹಿಸಿ ಗೆಲುವಿನ ನಾಗಾಲೋಟ ಪ್ರಾರಂಭಿಸಿದ ಚಿರಾಗ್, ದ.ಕ, ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ಬ್ಲ್ಯಾಕ್ ಬೆಲ್ಟ್ ಪಡೆದ ಖ್ಯಾತಿ ಇವರದ್ದು.

ಇದನ್ನೂ ಓದಿ: ಕಲಾ ಸ್ವರೂಪಿ ಅಕ್ಷತಾ ಕುಡ್ಲ

ತರಬೇತಿ ಪಡೆಯಲಾರಂಭಿಸಿದ ಒಂದೇ ವರ್ಷದಲ್ಲಿ ರಾಜ್ಯ ಮಟ್ಟದ ಪಂದ್ಯಾಕೂಟದಲ್ಲಿ ಇವರು ಭಗವಹಿಸಿದರು. 2017ರಲ್ಲಿ ಕುಶಾಲನಗರದಲ್ಲೇ ನಡೆದ “ಕೊಫುಕಾನ್ ಕರ್ನಾಟಕ ರಾಜ್ಯ ಕರಾಟೆ ಚಾಂಪಿಯನ್‍ಶಿಪ್” ನಲ್ಲಿ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ಕ್ರಮವಾಗಿ ಪ್ರಥಮ ಹಾಗೂ ತೃತೀಯ ಸ್ಥಾನವನ್ನು ಪಡೆದರು. ಇವರ ಯಶಸ್ಸಿಗೆ ಮತ್ತೊಂದು ಗರಿಯೆಂಬಂತೆ, 2018ರಲ್ಲಿ ಶಿಟೋರ್ಯು ಶುಕೊಕೈ ಕರಾಟೆ ಅಸೋಸಿಯೇಶನ್‍ನ ಪ್ರತಿನಿಧಿಯಾಗಿ ನೇಮಕಗೊಂಡರು. ಅದೇ ವರ್ಷ, ಕಲ್ಲಡ್ಕದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನವನ್ನು ಪಡೆದರು.

2019ರಲ್ಲಿ ಮೊದಲ ಬಾರಿಗೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಅಲ್ಲೂ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಮಂಗಳೂರಿನ ಹಂಪನಕಟ್ಟೆಯಲ್ಲಿ ನಡೆದ 12ನೇ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್‍ಶಿಪ್ ವೆಸ್ಟರ್ನ್ ಕಪ್ ನಲ್ಲಿ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಇವರು, ಬಳಿಕ ಕೇರಳ, ಹೈದರಾಬಾದ್, ಚೆನ್ನೈ, ಶಿವಮೊಗ್ಗ, ಮೈಸೂರು, ಉಡುಪಿ, ಹುಬ್ಬಳ್ಳಿ ಇತ್ಯಾದಿ ಕಡೆಗಳಲ್ಲಿ ಕಟಾ ಹಾಗೂ ಕುಮಿಟೆ ವಿಭಾಗಗಳಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ಜಯಿಸಿದ್ದಾರೆ.

“ಚೆನ್ನೈನಲ್ಲಿ ಅಮ್ಮಾ ಇಂಟನ್ರ್ಯಾಷನಲ್ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಭಗವಹಿಸಿ eಯಗಳಿಸಿದ್ದು ಅವಿಸ್ಮರಣೀಯ. ಏಕೆಂದರೆ ಅಲ್ಲಿ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಿಂದ ಚಿರಾಗ್ ಹೊರತುಪಡಿಸಿದರೆ ಇನ್ಯಾರೂ ಸ್ಪರ್ಧಿಗಳಿರಲಿಲ್ಲ. ಹಾಗೆಯೇ ಹುಬ್ಬಳ್ಳಿಯಲ್ಲೂ ಗೆದ್ದು ಬಂದಿರುವುದು ವಿಶೇಷ” ಎಂದು ತಮ್ಮ ಶಿಷ್ಯನ ಸಾಧನೆಯನ್ನು ಮೆಲುಕು ಹಾಕುತ್ತಾರೆ, ಗುರುಗಳಾದ ಶಿವರಾಮ್ ಎಮ್.ಕೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕರಾಟೆಯಲ್ಲದೆ, ಯೋಗದಲ್ಲೂ ಮಿಂಚುತ್ತಿರುವ ಚಿರಾಗ್, 2019ರ ಮೈಸೂರು ದಸರಾ ಚಾಂಪಿಯನ್. ಇದಲ್ಲದೆ, ಅಂತರ್ ಶಾಲಾ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ. ಕಿರಿಯ ವಯಸ್ಸಿನಲ್ಲೇ ಅಭೂತಪೂರ್ವ ಸಾಧನೆ ಮಾಡಿರುವ ಇರುವ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಿ, ಇತರರಿಗೂ ದಾರಿದೀಪವಾಗಲಿ ಎಂಬ ಸದಾಶಯ ನಮ್ಮದು.

ಇಂದುಧರ್ ಹಳೆಯಂಗಡಿ

15 ವರ್ಷದ ಇಂಡೋ-ಅಮೇರಿಕನ್ ಗೀತಾಂಜಲಿ ರಾವ್ ಟೈಮ್ಸ್ “ಕಿಡ್ ಆಫ್ ದ ಇಯರ್” ಆಗಿ ಆಯ್ಕೆ

LEAVE A REPLY

Please enter your comment!
Please enter your name here