ಕರ್ನಾಟಕದಲ್ಲಿ ಅಘೋಷಿತ ಲಾಕ್‌ಡೌನ್ ? ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದಾರೆ ಪೋಲೀಸರು, ಅಧಿಕಾರಿಗಳು!

0
281
Tap to know MORE!

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಲಾಕ್ಡೌನ್ ಇಲ್ಲ. ಬದಲಿಗೆ ಕಠಿಣ ನಿಯಮ ಜಾರಿಗೆ ತರಲು ಸಿಎಂ ಸೂಚಿಸಿದ್ದರು. ವೀಕೆಂಡ್ ಕರ್ಫ್ಯೂ ಜಾರಿ ಮಾಡಲು ಆದೇಶಿಸಿದ್ದರು. ಆದ್ರೆ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಯಲ್ಲಿ ಈಗಲಿಂದಲೇ ಎಲ್ಲವನ್ನು ಬಂದ್ ಮಾಡಿಸಲಾಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಪೊಲೀಸರು ಈಗಿನಿಂದಲೇ ಎಲ್ಲವನ್ನು ಕ್ಲೋಸ್ ಮಾಡಿಸಲಾಗುತ್ತಿದೆ. ಜನ ಈ ಘಟನೆಯಿಂದಾಗಿ ಗೊಂದಲಕ್ಕೀಡಾಗಿದ್ದಾರೆ.

ಅಗತ್ಯ ಸೇವೆ ಬಿಟ್ಟು ಇನ್ನುಳಿದ ಅಂಗಡಿ ಮುಗ್ಗಟ್ಟು ಬಂದ್ ಮಾಡಿಸಲಾಗುತ್ತಿದೆ. ಬಟ್ಟೆ ಅಂಗಡಿ ,ಮೊಬೈಲ್ ಶಾಪ್, ಜುವೆಲ್ಲರಿಸ್ ಸೇರಿ ಎಲ್ಲಾ ಅಂಗಡಿಗಳು ಬಂದ್ ಮಾಡಿಸಲಾಗಿದೆ. ಹಾಲು, ತರಕಾರಿ, ಹಣ್ಣುಗಳು ಸೇರಿ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಅಗತ್ಯ ಮೂಲಭೂತ ವಸ್ತುಗಳು ಮತ್ತು ಬಿಲ್ಡಿಂಗ್ ಮೆಟಿರಿಯಲ್ಸ್ ಮಾರಾಟ ಹೊರತು ಪಡಿಸಿ ಉಳಿದ ಶಾಪ್ ಗಳು ಕ್ಲೋಸ್ ಮಾಡಿಸಲಾಗಿದೆ.

ಆಯಾ ಠಾಣಾ ವ್ಯಾಪ್ತಿಯ ಪೊಲೀಸರಿಂದ ಮೇ 4 ರವರೆಗೆ ಕ್ಲೋಸ್ ಮಾಡುವಂತೆ ಶಾಪ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಕಟ್ಟಡ ಕಾಮಗಾರಿಗೆ ಮಾತ್ರ ಅವಕಾಶ ನೀಡಲಾಗಿದೆ. ಬೆಂಗಳೂರಿಗೆ ದಿಢೀರನೇ ಲಾಕ್ ಡೌನ್ ಮಾಡಿಸುತ್ತಿರುವುದು ಜನರ ಗೊಂದಲಕ್ಕೆ ಕಾರಣವಾಗಿದೆ.

3ನೇ ಗೈಡ್ ಲೈನ್ ಪ್ರಕಾರ ಪೊಲೀಸರು ಅಂಗಡಿಗಳನ್ನ ಕ್ಲೋಸ್ ಮಾಡಿಸುತ್ತಿದ್ದಾರೆ. ನಿನ್ನೆ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿ ಮಾರ್ಗ ಸೂಚಿ ಬಿಡುಗಡೆ ಮಾಡಿತ್ತು. ಅದರಲ್ಲಿ ವಾರದ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಮಾರ್ಗಸೂಚಿ ರಿಲೀಸ್ ಮಾಡಲಾಗಿತ್ತು.

LEAVE A REPLY

Please enter your comment!
Please enter your name here