ಕರ್ನಾಟಕ : ಇಂದಿನಿಂದ ಅನ್ಲಾಕ್ – ಹೊಸ ಮಾರ್ಗಸೂಚಿಗಳು ಪ್ರಕಟ!

0
295
Tap to know MORE!

ಬೆಂಗಳೂರು : ನಿನ್ನೆ ಸಂಜೆಯಷ್ಟೆ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದರಿಂದ, ಇಂದಿನಿಂದ ಬೆಂಗಳೂರು ಸೇರಿದಂತೆ, ರಾಜ್ಯಾದ್ಯಂತ ಎಂದಿನಂತೆ ನಿತ್ಯ ವ್ಯಾಪಾರ ಚಟುವಟಿಕೆಗಳು ಮುಂದುವರೆಯಲಿದೆ.

ನೂತನ ಮಾರ್ಗಸೂಚಿಯನ್ನು ಪ್ರಕಟಿಸಿರುವ ರಾಜ್ಯ ಸರಕಾರ, ರಾಜ್ಯದಲ್ಲಿ ಎಂದಿನಂತೆ ಪ್ರತಿ ಭಾನುವಾರ ಲಾಕ್ ಡೌನ್ ಮುಂದುವರೆಯಲಿದೆ ಮತ್ತು ಪ್ರತಿನಿತ್ಯ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಪ್ಯೂ ಜಾರಿಯಲ್ಲಿರಲಿದೆ ಎಂದು ರಾಜ್ಯ ತನ್ನ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ.

ಸರ್ಕಾರ ಹಿಂದಿನ ಮಾರ್ಗಸೂಚಿಗಳ ಪೈಕಿ, ಕೆಲ ಅಂಶಗಳನ್ನು ಬದಲಾವಣೆಗೊಳಿಸಿ ಜಾರಿ ಮಾಡಲು ಮುಂದಾಗುತ್ತಿದೆ.

ಮಾರ್ಗಸೂಚಿಯಲ್ಲಿ ಏನಿದೆ?
– ಮೊದಲು ಇದ್ದಂತೆ ಭಾನುವಾರದ ಕರ್ಫ್ಯೂ ಮುಂದುವರಿಯಲಿದೆ.
– ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳು ಬೆಳಗ್ಗೆ 5 ರಿಂದ ರಾತ್ರಿ 9 ರವರೆಗೆ ತೆರೆಯಬಹುದು.
– ಜನಸಂದಣಿಯನ್ನು ತಡೆಗಟ್ಟಲು ಬೆಂಗಳೂರು ಸೇರಿ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿರುವ ‌ತರಕಾರಿ ಮಾರುಕಟ್ಟೆಗಳು ಸ್ಥಳಾಂತರ ಮಾಡಬೇಕು.
– ಎಪಿಎಂಸಿಗಳಿಗೆ ಅಥವಾ ವಿಶಾಲ ಜಾಗಗಳಿಗೆ ತರಕಾರಿ ಮಾರುಕಟ್ಟೆಗಳು ಶಿಫ್ಟ್‌ ಆಗಲಿದೆ.
– ಪಾರ್ಕ್ ಗಳಲ್ಲಿ ನಡೆದಾಡಬಹುದು;  ಆದರೆ ಕಲ್ಲಿನ ಬೆಂಚ್‌ಗಳ ಮೇಲೆ ಕುಳಿತುಕೊಳ್ಳುವಂತಿಲ್ಲ!
– ಉದ್ಯಾನವನಗಳಲ್ಲಿ ಜಿಮ್ ಸಲಕರಣೆಗಳನ್ನು ಬಳಸುವುದಕ್ಕೂ ನಿಷೇಧ ಹೇರಲಾಗಿದೆ.
– ಕಂಟೈನ್ಮೆಂಟ್ ವಲಯಗಳಲ್ಲಿ ಎಲ್ಲ ಚಟುವಟಿಕೆಗಳಿಗೂ ನಿರ್ಬಂಧ ಮುಂದುವರಿಕೆ.
– ಜುಲೈ 31ರವರೆಗೆ ಈ ಮಾರ್ಗಸೂಚಿಗಳು ಅನ್ವಯವಾಗಲಿದೆ.

LEAVE A REPLY

Please enter your comment!
Please enter your name here