ಮಂಗಳೂರು: ರಾಜ್ಯದೆಲ್ಲೆಡೆ ಬಂದ್ಗೆ ವಿವಿಧ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಂಗಳೂರಿನಲ್ಲಿ ಎಂದಿನಂತೆ ವಾಹನ ಸಂಚಾರ ಮತ್ತೆ ಮಾರುಕಟ್ಟೆ ತೆರೆದಿದೆ. ಬಂದ್ ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ನೀರಸ ಪ್ರತಿಕ್ರಿಯೆ ದೊರೆತಿದ್ದು, ಎಂದಿನಂತೆ ಖಾಸಗಿ ಮತ್ತು ಕೆಎಸ್ಆರ್ಟಿಸಿ ಬಸ್ಗಳು, ಆಟೋಗಳು ರಸ್ತೆಗಿಳಿದಿವೆ. ಅದಲ್ಲದೇ, ಬಂದರು ಪ್ರದೇಶದಲ್ಲಿ ವ್ಯಾಪಾರ-ವಹಿವಾಟುಗಳು ಆರಂಭವಾಗಿವೆ.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ, ಮಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರದಾದ್ಯಂತ 300 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇಂದು ಬೆಳಿಗ್ಗೆಯಿಂದಲೇ ಪೊಲೀಸ್ ಅಧಿಕಾರಿಗಳು ರೌಂಡ್ಸ್ ನಲ್ಲಿದ್ದಾರೆ. ಬಲವಂತವಾಗಿ ಬಂದ್ ನಡೆಸಲು ಮುಂದಾದವರಿಗೆ ಮತ್ತು ಕೋವಿಡ್ 19 ನಿಯಮಾವಳಿ ಉಲ್ಲಂಘಿಸಿದವರಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬೈಕಂಪಾಡಿಯ ಎಪಿಎಂಸಿಯಲ್ಲಿ ಮಿಶ್ರಪ್ರತಿಕ್ರಿಯೆ ಕಂಡು ಬಂದಿದ್ದು, ರೈತಪರ, ಸಿಪಿಐಎಂ,ಸಿಐಟಿಯು ಬೆಂಬಲಿತ ಕಾರ್ಮಿಕರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಬಂಟ್ವಾಳ ತಾಲೂಕಿನಲ್ಲಿ ಯಾವುದೇ ರೀತಿಯ ಬಂದ್ ಕಂಡು ಬರಲಿಲ್ಲ. ಬಸ್ಸು, ಆಟೋಗಳ ಸಂಚಾರ ಯಥಾಸ್ಥಿತಿಯಂತಿದೆ. ಮುನ್ನೆಚ್ಚರಿಕೆಯಾಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.
ಮಂಗಳೂರಿನಲ್ಲಿ ಕೇವಲ ಪ್ರತಿಭಟನೆ ಮಾತ್ರ ನಡೆಯಲಿದೆ. ನಗರದ ಮಿನಿ ವಿಧಾನಸೌಧದ ಎದುರು ರೈತಪರ ಸಂಘಟನೆಗಳು, ಡಿವೈಎಫ್ಐ ,ಸಿಪಿಐ, ಸಿಪಿಐಎಂ, ಕಾಂಗ್ರೆಸ್, ಜೆಡಿಎಸ್, ಸಿಐಟಿಯು, ಎಐಟಿಯುಸಿ, ಡಿ ಎಸ್ ಎಸ್ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.
ಉಡುಪಿ
ಉಡುಪಿ ನಗರದಲ್ಲಿ ಬಸ್ ಸಂಚಾರ ಎಂದಿನಂತಿದ್ದು, ಬೆಳಿಗ್ಗೆ ಕೆಲವು ಸಂಘಟನೆಗಳು ರಸ್ತೆ ತಡೆ ನಡೆಸಿ ಬಸ್ ಸಂಚಾರಕ್ಕೆ ಅಡ್ಡಿ ಮಾಡಲು ಯತ್ನಿಸಿದವು. ಆದರೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ ಪ್ರಸಂಗ ನಡೆಯಿತು.
ಕಟಪಾಡಿ ಉದ್ಯಾವರ, ಶಂಕರಪುರ, ಕುರ್ಕಾಲು ಪರಿಸರದಲ್ಲಿ ಬಹುತೇಕ ತರಕಾರಿ ಅಂಗಡಿ, ಹೂವಿನ ಮಾರುಕಟ್ಟೆ, ರಿಕ್ಷಾ ಬಸ್ಸು ಸಹಿತ ಇತರ ವಾಹನಗಳ ಓಡಾಟವು ಮಾಮೂಲಿನಂತೆ ಕಂಡುಬರುತ್ತಿದೆ.
ಅದಲ್ಲದೆ ಅವಳಿ ಜಿಲ್ಲೆಗಳಲ್ಲಿ ಬಸ್ ಸಂಚಾರ ಯಥಾಸ್ಥಿತಿಯಿದೆ. ಬಂದ್ಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತಿದೆ