ವೀಕೆಂಡ್ ಕರ್ಫ್ಯೂ ನಡುವೆಯೂ ದ.ಕ – ಉಡುಪಿ ಜಿಲ್ಲೆಯಲ್ಲಿ ನಡೆದವು ಒಟ್ಟು 726 ಮದುವೆಗಳು!

0
170
ಸಾಂದರ್ಭಿಕ ಚಿತ್ರ | ಫೋಟೋ ಕೃಪೆ : ಟೈಮ್ಸ್ ಆಫ್ ಇಂಡಿಯಾ
Tap to know MORE!

ಮಂಗಳೂರು, ಏಪ್ರಿಲ್ 26: ಕೊರೊನಾ ಕರ್ಫ್ಯೂ ನಡುವೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮದುವೆ ಕಾರ್ಯಕ್ರಮಗಳು ನಿರಾತಂಕವಾಗಿ ನಡೆದಿದೆ. ಜಿಲ್ಲಾಡಳಿತದ ಬಿಗಿ ನಿಯಮದ ನಡುವೆ ಅವಿಭಜಿತ ಜಿಲ್ಲೆಯಲ್ಲಿ ಒಟ್ಟು 726 ಮದುವೆ ಕಾರ್ಯಕ್ರಮಗಳು ಭಾನುವಾರ ನಡೆದಿವೆ.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 82 ಮದುವೆ ಕಾರ್ಯಕ್ರಮಗಳು ನಡೆದಿದ್ದು, ಗ್ರಾಮೀಣ ಭಾಗದಲ್ಲಿ 225 ಮದುವೆ ಕಾರ್ಯಕ್ರಮ ನಡೆದಿದೆ. ಕೊರೊನಾ ಆತಂಕದ ನಡುವೆಯೇ 372 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟಿವೆ.

ಮಂಗಳೂರಿನಲ್ಲಿ‌ 52, ಬಂಟ್ವಾಳ ತಾಲೂಕಿನಲ್ಲಿ 62, ಬೆಳ್ತಂಗಡಿ 43, ಪುತ್ತೂರು 24, ಸುಳ್ಯ 19, ಕಡಬ 9 ಹಾಗೂ ಮೂಡಬಿದಿರೆಯಲ್ಲಿ 16 ಮದುವೆ ಕಾರ್ಯಕ್ರಮಗಳು ನಡೆದಿವೆ. ಸರ್ಕಾರದ ಕೋವಿಡ್ ಮಾರ್ಗಸೂಚಿ ಅನ್ವಯ 50 ಜನರು ಮಾತ್ರ ವಿವಾಹದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಉಡುಪಿ ಜಿಲ್ಲೆಯಲ್ಲಿ 354 ಮದುವೆಗಳು!
ಕೋವಿಡ್ 19 ಎರಡನೇ ಅಲೆ, ವಾರಾಂತ್ಯದ ಲಾಕ್ ಡೌನ್ ಕಠಿಣ ನಿಯಮದ ನಡುವೆ ಉಡುಪಿ ಜಿಲ್ಲೆಯಲ್ಲಿ ಭಾನುವಾರ ದಾಖಲೆ ಸಂಖ್ಯೆಯ ಸರಳ ಮದುವೆಗಳು ನಡೆದವು. ಜಿಲ್ಲೆಯ ಐದೂ ತಾಲೂಕಿನಲ್ಲಿ ಒಟ್ಟು ಅನುಮತಿ ಪಡೆದು ನಡೆದ ಸರಳ ಮದುವೆಗಳ ಸಂಖ್ಯೆ ಬರೋಬ್ಬರಿ 354.

ಈ ಎಲ್ಲಾ ಮದುವೆಗಳು ಕೋವಿಡ್-19 ನಿಯಮಾನುಸಾರ ನಡೆಯುತ್ತಿದ್ದು, ಪ್ರತಿ ಮದುವೆಗೂ 50 ಮಂದಿ ಭಾಗವಹಿಸಲು ಮಾತ್ರ ಅವಕಾಶವಿತ್ತು. ಸಂಬಂಧಿಕರು ಮತ್ತು ಸ್ನೇಹಿತರು‌ ಮದುವೆಯಲ್ಲಿ ಭಾಗವಹಿಸಲು ಅನಾನುಕೂಲ ಉಂಟಾಗಿದೆ.

ಆದರೆ, ಬಹುತೇಕ ಮದುವೆ ಕಾರ್ಯಕ್ರಮಗಳನ್ನು ಫೇಸ್ ಬುಕ್, ಯುಟ್ಯೂಬ್ ಮೂಲಕ ಲೈವ್ ಮಾಡಲಾಗುತ್ತಿದ್ದು, ಕುಟುಂಬಸ್ಥರು ಮತ್ತು ಸ್ನೇಹಿತರು ಮನೆಯಲ್ಲೇ ಕುಳಿತು ಮದುವೆ ಕಣ್ತುಂಬಿಕೊಳ್ಳುತ್ತಿದ್ದಾರೆ

LEAVE A REPLY

Please enter your comment!
Please enter your name here