ಕಲ್ಲಡ್ಕ : ಗೋಮಯದಿಂದ 10,000 ಹಣತೆಗಳನ್ನು ತಯಾರಿಸಿದ ವಿದ್ಯಾರ್ಥಿಗಳು !

0
109
Tap to know MORE!

ಬಂಟ್ವಾಳ: ದೀಪಾವಳಿ ಪ್ರಯುಕ್ತ ಮಾರುಕಟ್ಟೆಯಲ್ಲಿ ಹಲವಾರು ಪರಿಸರ ಸ್ನೇಹಿ ಹಣತೆಗಳು ಬಂದಿವೆ. ಆದರೆ, ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಮಾತ್ರ ವಿಭಿನ್ನ ರೀತಿಯ ಹಣತೆಗಳನ್ನು ತಯಾರಿಸಿ ಮೆಚ್ಚುಗೆ ಗಳಿಸಿದ್ದಾರೆ.

ಕಲ್ಲಡ್ಕ ಶಾಲೆಯ ಆವರಣದಲ್ಲಿರುವ ಗೋಶಾಲೆಯಲ್ಲಿರುವ ಸುಮಾರು 40ಕ್ಕೂ ಅಧಿಕ ಗೋವುಗಳ ಸಗಣಿಯಿಂದ 10 ಸಾವಿರ ಹಣತೆಗಳನ್ನು ತಯಾರಿಸಿದ್ದಾರೆ. ಈಗಾಗಲೇ ಇವುಗಳಲ್ಲಿ 12 ಹಣತೆಗಳನ್ನು ಪ್ರಧಾನಮಂತ್ರಿ ಕಾರ್ಯಾಲಯಕ್ಕೂ ಕಳುಹಿಸಿಕೊಡಲಾಗಿದೆ.

ಇದನ್ನೂ ಓದಿ: ನರಕಾಸುರನ ಸಂಹಾರದ ಪ್ರತೀಕ ‘ನರಕ ಚತುರ್ದಶಿ’

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸುಮಾರು 3 ಸಾವಿರದಷ್ಟು ವಿದ್ಯಾರ್ಥಿಗಳಿದ್ದಾರೆ. ಶಿಕ್ಷಕರು, ಪೋಷಕರು, ಸಾರ್ವಜನಿಕರ ಸಹಕಾರದಿಂದ ಗೋಮಯ ಹಾಗೂ ಮಣ್ಣಿನಿಂದ ಹಣತೆಗಳನ್ನು ತಯಾರಿಸಲಾಗಿದೆ. ಗೋಮಯದ ಪಾಕ ತಯಾರಿಸಿ, ಅಚ್ಚಿನಲ್ಲಿ ಒತ್ತಿ, ಬಿಸಿಲಿನಲ್ಲಿ ಒಣಗಿಸಿ ಹಣತೆ ರೆಡಿ ಮಾಡಲಾಗಿದೆ. ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾರ್ಗದರ್ಶನದಲ್ಲಿ ಹಣತೆಗಳನ್ನು ತಯಾರಿಸಲಾಗಿದೆ

LEAVE A REPLY

Please enter your comment!
Please enter your name here