ಕವಿ ಕಂಡ ರವಿ

0
170
Tap to know MORE!

ದೂರದಾ ಗಿರಿಯ ನೆತ್ತಿಮೇಲಿಂದ ಇಳಿದನಾ ರವಿಯು…
ಇದ ಕಾಣಲೆಂದೇ ಲೇಖನಿ‌ ಹಿಡಿದು ಕುಳಿತ್ತಿದ್ದನೀ ಕವಿಯು..

ಕಾಣಬೇಕಿತ್ತಾ ಸೊಬಗನು ,
ಸುತ್ತೆಲ್ಲಾ ಬಂಗಾರದ ಬೆಳಕ ಸೂಸಿದ ಕ್ಷಣವನು..

ಪುಷ್ಪ ಲೋಕವೆಲ್ಲಾ ಅರಳಿ ನಿಂತಿತ್ತು , ಬಾಲ ಭಾಸ್ಕರನಿಗೆ ಶುಭ ಕೋರಲು..
ಶುಕ ಸಾಮ್ರಾಜ್ಯವೇ ಕತ್ತಾಡಿಸುತ್ತಿದ್ದವು ಹಿಮ್ಮೇಳ ಸಾರಲು…

ಮೈಚಳಿಯ ಬಿಟ್ಟು ಗಿಡಮರಗಳು‌ ದೃಷ್ಟಿ ನೆಟ್ಟಿದ್ದವು, ದಿನಕ್ಕೊಮ್ಮೆ ಕಾಣುವ ಆ ಚಂದದ ಸೃಷ್ಟಿಯಾ ನೋಡಲು..

ತರುಲತೆಗಳಲಿ ನಿಂತಿದ್ದ ಹನಿಯ ಮೇಲು , ಹರಿಯುತ್ತಿದ್ದ ನೀರ ಮೇಲು ರವಿಯಷ್ಟೇ ರಾರಾಜಿಸುತ್ತಿದ್ದ….

ಏರುತಾ ಏರುತಾ ರವಿ ಬುವಿಯ ನೆತ್ತಿಯನ್ನೇರಿದ , ಮೆಲ್ಲಮೆಲ್ಲನೆ ಕಿರಣವ ಚುರುಕಾಗಿಸಿದ…

ಕೇಳಬೇಕಿತ್ತಾಗ ಬಿಸಿ ತಡೆಯಲಾರದ ಜನಗಳ ಗೋಳು, ಕೊಡೆಯಲ್ಲೇ ಬಂಧಿಯಾಗಿದ್ದರು ಬಹುಪಾಲು…

ಮರುಭೂಮಿಯಲ್ಲಿರುವಂತೇ ನೀರ ನುಂಗುತ್ತಿದ್ದರು, ಸುಡುತ್ತಿದ್ದ ಸೂರ್ಯನ ಕಂಡು ಶಪಿಸುತ್ತಿದ್ದರು…

ಬಾನೆಲ್ಲ ಸುತ್ತಿ ಬಸವಳಿದ ರವಿಯು ಮೆಲ್ಲನೇ ಜಾರಿದ ಕಡಲಾಚೆ ..
ಬರೆಯಲಾಗಲಿಲ್ಲ ಕವಿಗೆ ಆ ದಿಗಂತ ಸೌಂದರ್ಯವ ಕಂಡು..

ಕೆಂಪಾಗಿತ್ತು ತುಂಬು ಬಾನಗಲ , ಅಲೆಯ ಎತ್ತಿ ಎಸೆಯುತ್ತಿತ್ತು ಕಡಲಾಳ…
ಜಾರಿ ಜಾರಿ ರವಿಯಡಗಿದ ಕಡಲಿನೊಡಲಲ್ಲಿ , ಕತ್ತಲಾಗಿಸಿ ಬುವಿಯ …
ಜೊತೆಗೆ ಹಾಳೆ ಲೇಖನಿಯ ಮುಂದೆ ಕುಳಿತಿದ್ದ ಆಸೆಗಣ್ಣಿನ ಕವಿಯ…

ನಯನ್ ಕುಮಾರ್
ವಿವಿ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here