ಕಾಣೆಯಾಗಿದೆ “ನನ್ನ” ದೆಂಬ ಭ್ರಮೆ

0
156

ಮನುಕುಲದ ಮನುಜನಲ್ಲಿ
ನಾನು ನನ್ನದೆಂಬ ಭ್ರಮೆ
ಮೇಲ್ಜಾತಿ ಹಣೆಪಟ್ಟಿಗೆ
ನಾನೇ ಮೇಲೆಂಬ ಹಿರಿಮೆ

ಶ್ರೀಮಂತನಿಗೆ ಸಂಪತ್ತಿನ ದಾಹ
ಜಾತಿ ಧರ್ಮಗಳ ನಡುವೆ ಕಲಹ
ಮುಗಿಯದಷ್ಟು ಮುಗಿಸಲಾಗದ
ಆಸೆಗಳ ಬುತ್ತಿಯೊಳ ಮೋಹ

ಅರೆ ಎಲ್ಲವೂ ಕರಗಿ ಹೋಯಿತೆ
ಅಂಧಕಾರದ ಈ ಅಮಲು
ಕಳೆದುಹೋಯಿತೆ ನಾನು,
ನನ್ನದೆಂಬ ಈ ತೆವಲು

ಕಣ್ಣಿಗೆ ಕಾಣದ ಕೊರೋನಾ
ಕಲಿಸಿತು ಎಂತಹದ್ಭುತ ಪಾಠ
ಭೇಧವಿಲ್ಲ ನನಗಿಲ್ಲಿ ಎಲ್ಲರೂ
ಸಮಾನರಿಲ್ಲಿ

ಜನನ ಮರಣದ ನಡುವ ಜೀವನ
ಇರುವುದ ಕೇವಲ ಅಲ್ಪ ದಿನ
ಗೆಲ್ಲುವುದು ಎಂದೂ ಒಳ್ಳೆತನ
ಬೇಡ “ನನ್ನಿಂದಲೇ “ಎಂಬ ಜಂಭದ ಗುಣ

ಅರ್ಪಿತಾ ಕುಂದರ್
ವಿವೇಕಾನಂದ ಕಾಲೇಜು ಪುತ್ತೂರು

LEAVE A REPLY

Please enter your comment!
Please enter your name here