ಕಾಲಿನ ಮೂಲಕ 10ನೇ ತರಗತಿ ಪರೀಕ್ಷೆ ಬರೆದು ರಾಜ್ಯದ ಜನತೆಯ ಗಮನ ಸೆಳೆದಿದ್ದ ಬಂಟ್ವಾಳದ ಕೌಶಿಕ್ ನ ವಿದ್ಯಾಭ್ಯಾಸ ಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ನೀಡಿದ ಭರವಸೆಯಂತೆ ನೆರವಾಗಿದ್ದು, ಇದೀಗ ಕೌಶಿಕ್ ಮೂಡಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿಗೆ ಸೇರ್ಪಡೆಗೊಂಡಿದ್ದಾನೆ.
ಇದನ್ನೂ ಓದಿ : ಶಿಕ್ಷಣ ಸಚಿವರಿಂದ ಮೆಚ್ಚುಗೆ ಪಡೆದ ಕೌಶಿಕ್
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಧ್ಯಕ್ಷ ಡಾ. ಮೋಹನ್ ಆಳ್ವ ಅವರ ಜೊತೆ ಮಾತುಕತೆ ನಡೆಸಿದ ಶಾಸಕರು ಶಿಕ್ಷಣಕ್ಕೆ ದಾಖಲಾತಿ ವ್ಯವಸ್ಥೆಗೆ ಕ್ರಮಕೈಗೊಂಡಿದ್ದಾರೆ. ಶಾಸಕರ ಮಾತಿನಂತೆ ಮೋಹನ್ ಆಳ್ವ ಅವರು ಕೌಶಿಕ್ ಗೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ವ್ಯವಸ್ಥೆ ಕಲ್ಪಿಸಿದ್ದಾರೆ. ಕೌಶಿಕ್ ನ ಆಸೆಯಂತೆ ಮೋಹನ್ ಆಳ್ವ ಅವರು ವಾಣಿಜ್ಯ ವಿಭಾಗದಲ್ಲಿ ಪಿ.ಯು.ಸಿ. ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.