ಕಾಲಿನಲ್ಲಿ ಪರೀಕ್ಷೆ ಬರೆದ ಪೋರ..!

0
203
Tap to know MORE!

ಮಹಾಮಾರಿ ಕೊರೋನಾ ಭೀತಿಯ ನಡುವೆ, ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ನಿನ್ನೆ ಪ್ರಾರಂಭವಾಗಿದೆ. ಶೇ.98ರಷ್ಟು ಹಾಜರಾತಿ ಇತ್ತು ಎಂದು ಹರ್ಷದಿಂದ ಶಿಕ್ಷಣ ಸಚಿವರು ನಿನ್ನೆ ಹೇಳಿದ್ದರು. ಭೀತಿಯ ನಡುವೆಯೂ ಪರೀಕ್ಷೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನೂ ಸಲ್ಲಿಸಿದ್ದರು. ಇದರ ಮಧ್ಯದಲ್ಲಿ, ಒಬ್ಬ ವಿಶೇಷ ವಿದ್ಯಾರ್ಥಿ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೆ ಬಂದಿರುವುದು ವಿಶೇಷ.

ಇದನ್ನೂ ಓದಿ : ಕಾಲಿನಲ್ಲಿ ಪರೀಕ್ಷೆ ಬರೆದ ಪೋರನಿಗೆ ಆಳ್ವಾಸ್‌ನಲ್ಲಿ ಪಿಯು ವಿದ್ಯಾಭ್ಯಾಸಕ್ಕೆ ವ್ಯವಸ್ಥೆ

ಸಚಿವ ಸುರೇಶ್ ಕುಮಾರ್ ತಮ್ಮ ಟ್ವಿಟ್ಟರ್ ನಲ್ಲಿ “ಬಂಟ್ವಾಳ‌ ತಾಲ್ಲೂಕಿನ ಎಸ್.ವಿ.ಎಸ್ ಪ್ರೌಢ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೇ ಕಾಲಿನ ಬೆರಳುಗಳ ಮೂಲಕವೇ ಉತ್ತರ ಬರೆದ‌ ಈ ಪೋರ ಕೌಶಿಕ್ ನಿಗೆ ನನ್ನ ಹೃದಯಪೂರ್ವ ಮೆಚ್ಚುಗೆ. ಇಂತಹ ವ್ಯಕ್ತಿಗಳು ಬದುಕಿನ‌ ಸಾರ್ಥಕ‌ ಅರ್ಥ ಕಲ್ಪಿಸುತ್ತಾರೆ. ಸಮಾಜದ ಎಲ್ಲ ಮಾನವೀಯ ನಿಲುವುಗಳನ್ನು ಸಮರ್ಥಿಸುತ್ತಾರೆ ಎಂದು ಬರೆದಿದ್ದಾರೆ.

LEAVE A REPLY

Please enter your comment!
Please enter your name here