ಕಾಸರಗೋಡು : 27 ವರ್ಷದ ಗರ್ಭಿಣಿ, ಬಸ್ಸಿನಡಿ ಬಿದ್ದು ಸಾವು!

0
192
Tap to know MORE!

ಮನಕಲಕುವ ಘಟನೆಯೊಂದು ಪೆರಾವೂರ್‌ನಲ್ಲಿ ನಡೆದಿದೆ. ಗರ್ಭಿಣಿಯಾಗಿದ್ದ ದಾದಿಯೊಬ್ಬಳು, ಬಸ್ಸಿನ ಚಕ್ರಗಳ ಅಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಸೆಪ್ಟೆಂಬರ್ 2 ರ ಬುಧವಾರ, ಬೆಳಿಗ್ಗೆ 8 ಗಂಟೆ ಸುಮಾರಿಗೆ ಕಣ್ಣೂರಿನ ಪೆರಾವೂರಿನಲ್ಲಿ ಈ ಘಟನೆ ನಡೆದಿದೆ.

ಕಣ್ಣೂರಿನ ಆಸ್ಟರ್ ಎಂಐಎಂಎಸ್ ಆಸ್ಪತ್ರೆಯಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದ ದಿವ್ಯಾ (27) ಅಪಘಾತಕ್ಕೆ ಬಲಿಯಾಗಿದ್ದಾಳೆ.

ಇವರು ತಮ್ಮ ದೈನಂದಿನ ಕೆಲಸಕ್ಕಾಗಿ ಆಸ್ಪತ್ರೆಗೆ ಹೋಗಲು ಬಸ್ ಹತ್ತಿದ್ದರು. ಆಗ ಈ ಘಟನೆ ಸಂಭವಿಸಿದೆ. ಗಂಭೀರ ಗಾಯಗಳಿಂದ ಬಳಲುತ್ತಿದ್ದ ದಿವ್ಯಾ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗಳಿಗೆ ಪ್ರತಿಕ್ರಿಯಿಸದ ಅವರು, ತೀರಿ ಹೋದರು.

ದಿವ್ಯಾ ಆರು ತಿಂಗಳ ಗರ್ಭಿಣಿಯಾಗಿದ್ದಳು ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here