ಕಾಸರಗೋಡಿನ ಗ್ರಾಮಗಳ ಹೆಸರು ಮಲಯಾಳಂಗೆ ಬದಲಿಸಲು ಸಿದ್ಧತೆ | ಗಡಿ ಪ್ರಾಧಿಕಾರ, ಕನ್ನಡ ಸಂಘಟನೆಗಳ ವಿರೋಧ

0
115
Tap to know MORE!

ಬೆಂಗಳೂರು: ಕಾಸರಗೋಡು ಜಿಲ್ಲೆಯ ಕೆಲವು ಗ್ರಾಮಗಳ ಕನ್ನಡದ ಹೆಸರುಗಳನ್ನು ಮಲಯಾಳಿ ಭಾಷೆಗೆ ಬದಲಾಯಿಸುವ ಪ್ರಕ್ರಿಯೆಯನ್ನು ಕೇರಳ ಸರ್ಕಾರ ಪ್ರಾರಂಭಿಸಿದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪ ದೂರಿದೆ.

ಕರ್ನಾಟಕದ ಗಡಿಭಾಗದಲ್ಲಿ ಕನ್ನಡ ಭಾಷೆಯನ್ನೇ ಹೆಚ್ಚು ಬಳಸುವಂತಹ ಕನ್ನಡಿಗರಿರುವ ಹಾಗೂ ಅಪಾರ ಭಾಷಾ ಅಭಿಮಾನವುಳ್ಳ ಗಡಿಭಾಗದ ಕೇರಳ ರಾಜ್ಯದಲ್ಲಿರುವ ಪ್ರಖ್ಯಾತ ತಾಣಗಳಾದ ಮಂಜೇಶ್ವರ ಮತ್ತು ಕಾಸರಗೋಡಿನ ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಸೂಚಿಸುವ ಹೆಸರುಗಳನ್ನು ಹೊಂದಿದ್ದ ಕೆಲವು ಹಳ್ಳಿಗಳ ಹೆಸರನ್ನು ಕೇರಳ ಸರ್ಕಾರ ಸ್ಥಳೀಯ ಸಂಸ್ಥೆಗಳು ಬದಲಾಯಿಸುವಂತಹ ಪ್ರಕ್ರಿಯೆ ನಡೆಸುತ್ತಿದೆ.

ಇನ್ನು ಮುಂದೆ ಇಂಜಿನಿಯರಿಂಗ್ ಶಿಕ್ಷಣವನ್ನು ಕನ್ನಡದಲ್ಲಿಯೂ ಪಡೆಯಬಹುದು!

ಕೇರಳ ಸರ್ಕಾರವು ಮಂಜೇಶ್ವರ ಹಾಗೂ ಕಾಸರಗೋಡಿನ ಕೆಲವು ಹಳ್ಳಿಗಳ ಹೆಸರನ್ನು ಬದಲಾಯಿಸಿ ಮಲಯಾಳಂ ಭಾಷೆಯ ಹೆಸರುಗಳನ್ನು ನೀಡಲು ಹೊರಟಿರುವುದು ಆ ಭಾಗದ ಕನ್ನಡಿಗರ ಪರಂಪರಾಗತ ಭಾವನೆಗಳಿಗೆ ಧಕ್ಕೆ ತರುವಂತಾಗಿರುತ್ತದೆ ಎಂದು ಗಡಿ ಪ್ರಾಧಿಕಾರ ಆಕ್ರೋಶ ವ್ಯಕ್ತಪಡಿಸಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಯಾವ ಗ್ರಾಮದ ಹೆಸರು ಬದಲು?: 

ಪ್ರಸ್ತುತ ಮಧೂರು ಎಂಬ ಗ್ರಾಮದ ಹೆಸರನ್ನು ಮಧುರಮ್‌, ಕಾರಡ್ಕ ಹೆಸರನ್ನು ಕಡಗಮ್‌, ಪಿಳಿಕುಂಜೆ ಹೆಸರನ್ನು ಪಿಳಿಕುನ್ನು, ಮಂಜೇಶ್ವರ ಹೆಸರನ್ನು ಮಂಜೇಶ್ವರಮ್‌, ಕುಂಬಳೆ ಹೆಸರನ್ನು ಕುಂಬ್ಳಾ, ನೆಲ್ಲಿಕುಂಜ ಹೆಸರನ್ನು ನೆಲ್ಲಿಕುನ್ನಿ, ಮಲ್ಲ ಹೆಸರನ್ನು ಮಲ್ಲಮ್‌, ಬೇದಡ ಹೆಸರನ್ನು ಬೆಡಗಮ್‌, ಆನೆಬಾಗಿಲು ಹೆಸರನ್ನು ಆನೆವಾಗಿಲ್‌, ಹೊಸದುರ್ಗ ಹೆಸರನ್ನು ಪುದಿಯಕೋಟ, ಸಸಿಹಿತ್ತು ಹೆಸರನ್ನು ಶೈವಲಪ್‌ ಎಂದು ಬದಲಿಸಲು ಮುಂದಾಗಿದೆ.

ಈ ಬಗ್ಗೆ ಕರ್ನಾಟಕದ ಗಡಿ ಪ್ರದೇಶ ಅಭಿವೃದ್ಧಿಯ ಅಧ್ಯಕ್ಷರು ಕೇರಳ ಸರ್ಕಾರದ ಮತ್ತು ಲೋಕೋಪಯೋಗಿ ಹಾಗೂ ಕಂದಾಯ ಸಚಿವರಿಗೆ ಪತ್ರ ಬರೆದು ಕನ್ನಡದ ಗ್ರಾಮಗಳ ಹೆಸರುಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದೆಂದು ಕೋರಿದೆ.

LEAVE A REPLY

Please enter your comment!
Please enter your name here