ನನ್ನ ನೆಚ್ಚಿನ ನಾಡು
ಕವಿಗಳ ಮೆಚ್ಚಿನ ಬೀಡು
ಬಹು ಭಾಷೆಗಳ ಗೂಡು
ಅದುವೇ ನಮ್ಮ ಕಾಸರಗೋಡುದೇವಾಲಯಗಳ ಶಿಲನ್ಯಾಸ ಸುಂದರ
ಹಕ್ಕಿಗಳ ಸುಪ್ರಭಾತ ವೇ ಶೃಂಗಾರ
ಭಾಷೆಗಳ ಸೋಬಗೇ ಅಲಂಕಾರ
ಇಲ್ಲಿ ಹುಟ್ಟಿದ ಜೀವನವೇ ಬಂಗಾರಯಕ್ಷಗಾನ ಬೊಂಬೆಯಾಟ ಕಲೆಯ ಆಟ
ತೆಯಗಳ ಕಣ್ಮನ ಸೆಳೆವ ನೋಟ
ಹಬ್ಬಗಳಲ್ಲಿ ಸವಿಯುವ ಬಗ್ಗೆ ಬಗ್ಗೆ ಔತಣಕೂಟ
ಕೇರಳ ರಾಜ್ಯದ ಸ್ವರ್ಣ ಕಿರೀಟಶಿವಪ್ಪನಾಯಕನ ಕೋಟೆಯ ಕಳೆ
ಹರಿವಳು ಚಂದದಿ ಚಂದ್ರಗಿರಿ ಹೊಳೆ
ಪೈ, ರೈ ಕವಿಗಳ ಕೃತಿಯ ಸೆಳೆ
ಕಾಸರಗೋಡಿನಲ್ಲಿ ಹುಟ್ಟಿದ ಬಾಳೆ ಹೊಂಬಾಳೆ-ಗಿರೀಶ್ ಪಿ ಎಂ, ಪರೇಕಡವು