ಕುಡಿತ ಹಾಳುಮಾಡುವುದು ಖಂಡಿತಹೋಗುವುದು ಕೆಡುವುದು ಮನ ಹಿಡಿತ
ಕುಡಿತ ತಂದ ಸಾಲದ ಹೊಡೆತ
ಕೂಡಿಟ್ಟ ಹಣವೆಲ್ಲ ಇದಕ್ಕೆ ಕಡಿತ
ಸಾಲದ ಸುಳಿಯಲ್ಲಿ ಬೀಳುವ ಬಾಳು
ಕೇಳುವವರಾರು ಮನೆಯವರ ಗೋಳು
ದಯಮಾಡಿ ಕುಡಿತದಿಂದ ಮರಳು
ಬಿಡು ಬೇಡ ಕುಡಿತದ ಮರಳು ಕುಡಿತ ನಿಜವಾಗಿಯೂ ಅದು ಶಾಪ
ಅದು ಆರಿಸುವುದು ಜೀವನದ ದೀಪ
ಬಿಟ್ಟರೆ ಒಳಿತು ಜೀವನ
ಆಗ ಜೀವನವೇ ಪಾವನ
-ಗಿರೀಶ್ ಪಿ.ಎಂ