ಮಂಗಳೂರು : ಮತ್ತೋರ್ವ ರೌಡಿಶೀಟರ್‌ನ ಹತ್ಯೆ | ಕುದ್ರೋಳಿ ಬಳಿ ಶವ ಪತ್ತೆ!

0
192
Tap to know MORE!

ಮಂಗಳೂರು: ಬೊಕ್ಕಪಟ್ಣದ ರೌಡಿ ಶೀಟರ್ ಇಂದ್ರಜಿತ್ (45) ಎಂಬಾತನ ಶವವು ಬರ್ಬರವಾಗಿ ಹತ್ಯೆಗೈದು ಎಸೆದ ಸ್ಥಿತಿಯಲ್ಲಿ ಗುರುವಾರ ನಸುಕಿನ ಜಾವ ನಗರದ ಕುದ್ರೋಳಿ ಸಮೀಪದ ಕರ್ನಲ್‌ ಗಾರ್ಡನ್ ಬಳಿ ಪತ್ತೆಯಾಗಿದೆ.

ಆತ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿದ್ದ. ಬುಧವಾರ ತಡರಾತ್ರಿಯಿಂದ ಗುರುವಾರ ನಸುಕಿನ ಜಾವದೊಳಗೆ ಈ ಘಟನೆ‌ ನಡೆದಿರುವ ಶಂಕೆ ಇದೆ.

ಇದನ್ನೂ ಓದಿ: ಕಾವೂರು ಮಲ್ಲಿ ಲೇಔಟ್‌ನಲ್ಲಿ ಮಾರಕಾಸ್ತ್ರಗಳಿಂದ ಉದ್ಯಮಿಯೊಬ್ಬರ ಕೊಲೆ!

ಮಾರಕ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಿ ಗಾರ್ಡನ್ ಬಳಿ ಎಸೆಯಲಾಗಿದ್ದು, ಬೆಳಿಗ್ಗೆ 6 ಗಂಟೆ ಸುಮಾರಿಗೆ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಬರ್ಕೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here