ಪ್ರತಿಭಟನೆಯ ನಡುವೆಯೂ ಕೃಷಿ ಮಸೂದೆಗಳಿಗೆ ತಮ್ಮ ಅಂಕಿತ ಹಾಕಿದ ರಾಷ್ಟ್ರಪತಿ ಕೋವಿಂದ್

0
350
Tap to know MORE!

ಹೊಸದಿಲ್ಲಿ: ದೇಶದ ರೈತರನ್ನು ಸ್ವಾವಲಂಬಿಗಳನ್ನಾಗಿ ಮತ್ತು ಬೆಲೆಗಳನ್ನು ದಲ್ಲಾಳಿ ಮುಕ್ತ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರವು ಮೂರು ಪ್ರಮುಖ ಕೃಷಿ ಮಸೂದೆಗಳನ್ನು ಜಾರಿಗೆ ತಂದಿದೆ. ದೇಶಾದ್ಯಂತ ಈ ಮಸೂದೆಗಳ ವಿರುದ್ಧ ನಡೆಯುತ್ತಿರುವ ಭಾರಿ ಪ್ರತಿಭಟನೆಯ ನಡುವೆಯೇ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ತಮ್ಮ ಅಂಕಿತವನ್ನು ಹಾಕಿದ್ದಾರೆ. ಈ ಮೂರೂ ವಿವಾದಾತ್ಮಕ ಮಸೂದೆಗಳು ಸಂಸತ್ತಿನಲ್ಲಿ ಇತ್ತೀಚೆಗಷ್ಟೇ ಅನುಮೋದನೆಯನ್ನು ಪಡೆದುಕೊಂಡಿದ್ದವು.

ದೇಶದ ರೈತರ ಹಿತಕ್ಕೆ ಮಾರಕವಾಗಿರುವ ಹಾಗೂ ಖಾಸಗಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ದುರುದ್ದೇಶದಿಂದ ಕೂಡಿರುವ ಈ ರೈತ ವಿರೋಧಿ ಮಸೂದೆಗಳನ್ನು, ಸಂಸತ್ತಿನ ನಿಯಮಾವಳಿಗಳನ್ನು ‘ಗಾಳಿಗೆ ತೂರಿ’ ‘ಅಸಂವಿಧಾನಿಕವಾಗಿ’ ಮಂಜೂರು ಮಾಡಿಕೊಂಡಿರುವುದರಿಂದ ಈ ಮಸೂದೆಗಳಿಗೆ ಸಹಿ ಹಾಕಬಾರದು ಎಂದು 12ಕ್ಕೂ ಹೆಚ್ಚು ವಿರೋಧ ಪಕ್ಷಗಳು ರಾಷ್ಟ್ರಪತಿಯವರಿಗೆ ಮನವಿಯನ್ನು ಸಲ್ಲಿಸಿದ್ದವು.

ರಾಷ್ಟ್ರಪತಿಯವರ ಅಂಕಿತದ ಬೆನ್ನಲ್ಲೇ ಕೇಂದ್ರ ಸರಕಾರವು ಈ ಮೂರೂ ಮಸೂದೆಗಳನ್ನು ಗಜೆಟ್ ನೋಟಿಫಿಕೇಶನ್ ಮಾಡಿದ್ದು ಶೀಘ್ರದಲ್ಲೇ ಇವುಗಳು ಕಾಯ್ದೆ ರೂಪದಲ್ಲಿ ಜಾರಿಗೆ ಬರಲಿವೆ.

LEAVE A REPLY

Please enter your comment!
Please enter your name here