“ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳಿಗೆ ಒಂದು ವರ್ಷ ವೇತನ ರಹಿತ ರಜೆ ಪ್ರಸ್ತಾಪವಷ್ಟೆ, ಇನ್ನೂ ಅಧಿಕೃತವಾಗಿಲ್ಲ”

0
88

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ತನ್ನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಒಂದು ವರ್ಷದ ರಜೆ ಮಂಜೂರು ಮಾಡುವುದನ್ನು ಪರಿಗಣಿಸುವಂತೆ, ತನ್ನ ಸಹೋದರಿ ನಿಗಮಗಳ ವ್ಯವಸ್ಥಾಪಕರಿಗೆ ಆಂತರಿಕ ಪತ್ರವನ್ನು ರವಾನಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಆದರೆ, ಇದು ಕೇವಲ ಪ್ರಸ್ತಾಪವೇ ಹೊರತು, ಈ ಬಗ್ಗೆ ಇನ್ನೂ ಅಧಿಕೃತವಾಗಿ ಏನೂ ನಿರ್ಧಾರವಾಗಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

“ಇದು ಆಂತರಿಕ ಕಚೇರಿ ಟಿಪ್ಪಣಿ ಮತ್ತು ಇನ್ನೂ ಏನೂ ಅಧಿಕೃತವಾಗಿಲ್ಲ. ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ತನ್ನ ಮೂರು ಅಂಗಸಂಸ್ಥೆಗಳಾದ ಬಿಎಂಟಿಸಿ, ಎನ್‌ಕೆಎಸ್‌ಆರ್‌ಟಿಸಿ ಮತ್ತು ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿಗೆ ಪತ್ರ ಕಳುಹಿಸಲಾಗಿದೆ” ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಲಾಸಾದ್ ಅವರು, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಎನ್‌ಇಕೆಎಸ್‌ಆರ್‌ಟಿಸಿ) ಮತ್ತು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕರ ಅಭಿಪ್ರಾಯ ತೆಗೆಯಲು ಮತ್ತು ಇದರೊಂದಿಗೆ ರಜೆ ಪ್ರಸ್ತಾಪದ ಬಗ್ಗೆ ಕೋರಿ ಪತ್ರ ಬರೆಯಲಾಗಿದೆ ಎಂದಿದ್ದಾರೆ.

“ಕೆಲವು ಹಿರಿಯ ಅಧಿಕಾರಿಗಳು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕೆಎಸ್ಆರ್ಟಿಸಿ ಈ ನಿರ್ಧಾರವನ್ನು ಕೈಬಿಡಬಹುದು. ಆದರೆ ಇನ್ನೂ ಏನೂ ಅಧಿಕೃತವಾಗಿಲ್ಲ. ನಾವು ಮಂಡಳಿಯ ಸಭೆಗೆ ಹೋಗಬೇಕು ಮತ್ತು ಮಂಡಳಿಯು ನಿರ್ಧಾರ ತೆಗೆದುಕೊಳ್ಳುತ್ತದೆ. ಅಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು, ಅದು ಅಧಿಕೃತವಾಗುತ್ತದೆ” ಎಂದು ಅಧಿಕಾರಿಯಬ್ಬರು ಹೇಳಿದರು.

ಅಧಿಕಾರಿಯ ಪ್ರಕಾರ, ಕೆಎಸ್‌ಆರ್‌ಟಿಸಿ ಎಂಡಿ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಿಗೆ ಕೇಡರ್ ನಿಯಂತ್ರಣ ಪ್ರಾಧಿಕಾರವಾಗಿದೆ. ನಾಲ್ಕು ವ್ಯವಸ್ಥಾಪಕ ನಿರ್ದೇಶಕರನ್ನು ಸಂಪರ್ಕಿಸಿದ ನಂತರವೇ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

LEAVE A REPLY

Please enter your comment!
Please enter your name here