ನಾಳೆ ಎಂದಿನಂತೆ ಇರಲಿದೆ ಬಸ್ ಸಂಚಾರ : ಕೆಎಸ್‌ಆರ್‌ಟಿಸಿ ಸ್ಪಷ್ಟನೆ

0
200
Tap to know MORE!

ಬೆಂಗಳೂರು: ಕರ್ನಾಟಕ ಬಂದ್‌ ಇರುವ ಹಿನ್ನೆಲೆಯಲ್ಲಿ ನಾಳೆ (ಸೆ.28ರಂದು) ಬಸ್‌ ಇರುತ್ತದೋ ಇಲ್ಲವೋ ಎನ್ನುವ ಗೊಂದಲಕ್ಕೆ ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕೆಎಸ್‌ಆರ್‌ಟಿಸಿ, ನಾಳೆ‌ ಕರ್ನಾಟಕ ಬಂದ್‌ಗೆ ಸಂಬಂಧಪಟ್ಟಂತೆ ಕೆಎಸ್ಆರ್‌ಟಿಸಿ ಬಸ್ಸುಗಳ ಕಾರ್ಯಾಚರಣೆಯಲ್ಲಿ‌ ಯಾವುದೇ ವ್ಯತ್ಯಯವಾಗುವುದಿಲ್ಲ. ಎಂದಿನಂತೆ ಕಾರ್ಯಾಚರಣೆ‌ ನಡೆಸಲಿವೆ. ಪ್ರಯಾಣಿಕರಲ್ಲಿ ಯಾವುದೇ ಗೊಂದಲ ಹಾಗೂ ಆತಂಕ ಬೇಡ, ಎಂದಿದೆ.

ಸಾರಿಗೆ ವ್ಯವಸ್ಥೆಯು ಅಗತ್ಯ ಸೇವೆಯಾಗಿರುವುದರಿಂದ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರಯಾಣಿಕರ ಬೇಡಿಕೆ ಹಾಗೂ ಅಗತ್ಯನುಸಾರ ಬಸ್ಸುಗಳ ಕಾರ್ಯಾಚರಣೆಯನ್ನು ಮಾಡಲಾಗುವುದು ಎಂದು ಮಾಹಿತಿ ನೀಡಿದೆ.

LEAVE A REPLY

Please enter your comment!
Please enter your name here