ಕೆಜಿಎಫ್ ಚಾಪ್ಟರ್ 2: ಮಹತ್ವದ ಘೋಷಣೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್!

0
159
Tap to know MORE!

ಬೆಂಗಳೂರು: ಬಹುಭಾಷಾ ಸಿನಿಮಾ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಚಿತ್ರತಂಡ ಇದೀಗ ಸಿಹಿ ಸುದ್ದಿ ನೀಡಿದೆ. ಇಂದು (ಜುಲೈ 06) ಸಂಜೆ ಈ ಕುರಿತು ನಿರ್ದೇಶಕ ಪ್ರಶಾಂತ್‌ ನೀಲ್‌ ಸೇರಿದಂತೆ ಇಡೀ ಚಿತ್ರತಂಡ ಟ್ವೀಟ್ ಮಾಡಿದ್ದು, ಶೀಘ್ರದಲ್ಲೆ ರಿಲೀಸ್ ಡೇಟ್ ಘೋಷಿಸುವುದಾಗಿ ತಿಳಿಸಿದೆ.

ಈ ಹಿಂದೆ ಚಿತ್ರತಂಡ ಘೋಷಿಸಿದಂತೆ ಜುಲೈನಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ (ಜುಲೈ 21– 22) ಎಂದು ಹೇಳಲಾಗಿತ್ತು. ಆದರೆ, ಈಗ ಪ್ರಕಟಿಸಿರುವ ಪೋಸ್ಟರ್‌ ಚಿತ್ರದ ಮೇಲಿನ ನಿರೀಕ್ಷೆ ಹಾಗೂ ಕುತೂಹಲ ಹೆಚ್ಚಿಸಿದೆ. ಮುಂದಿನ ಪ್ರಕಟಣೆ ಯಾವಾಗ ಬರುತ್ತದೆ ಎಂದು ಕೆಜಿಎಫ್‌ ಚಿತ್ರಾಭಿಮಾನಿಗಳು ಹಾಗೂ ಯಶ್‌ ಅಭಿಮಾನಿಗಳು ಕಾಯುತ್ತಿದ್ದಾರೆ.ಚಿತ್ರದಲ್ಲಿ ಸಂಜಯ್‌ ದತ್‌, ರವೀನಾ ಟಂಡನ್‌ ಸೇರಿದಂತೆ ಹಲವು ಪ್ರಮುಖ ನಟರು ಇದ್ದಾರೆ.

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ಚಿತ್ರ ನಿರ್ಮಿಸುತ್ತಿದ್ದಾರೆ. ಪ್ರಶಾಂತ್‌ ನೀಲ್‌ ನಿರ್ದೇಶಿಸಿದ್ದಾರೆ.

ಕೆಜಿಎಫ್ ಪ್ರಚಾರ : ಚಿತ್ರತಂಡದಿಂದ ಬಿಡುಗಡೆ ಆಯ್ತು “ಕೆಜಿಎಫ್ ಟೈಮ್ಸ್” ಪತ್ರಿಕೆ

ಈ ವರ್ಷ ತೆರೆ ಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಕೆಜಿಎಫ್ ಚಾಪ್ಟರ್ 2 ಅಗ್ರ ಸ್ಥಾನದಲ್ಲಿದೆ. ಚಾಪ್ಟರ್ 1 ಕಣ್ತುಂಬಿಕೊಂಡಿರುವ ರಾಕಿ ಭಾಯ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಇನ್ನು, ಕೆಜಿಎಫ್​ 2 ಸೆಪ್ಟೆಂಬರ್ 9ರಂದು ಸಿನಿಮಾ ತೆರೆಗೆ ಬರಲಿದೆ ಎನ್ನುವ ಮಾತು ಹರಿದಾಡಿದೆ. ಆದರೆ, ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಇಂದು ಕೂಡ ಪ್ರಶಾಂತ್​ಆ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಕೆಜಿಎಫ್​ 2ನಲ್ಲಿ ಯಶ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ, ಶ್ರೀನಿಧಿ ಶೆಟ್ಟಿ ಚಿತ್ರದ ನಾಯಕಿ. ಈ ಸಿನಿಮಾದಲ್ಲಿ ಬಾಲಿವುಡ್​ ಸ್ಟಾರ್​ ನಟ ಸಂಜಯ್​ ದತ್​ ಮುಖ್ಯ ವಿಲನ್​ ಆಗಿ ನಟಿಸಿದ್ದಾರೆ. ಕೆಜಿಎಫ್​-2 ಬಾಕ್ಸ್​ ಆಫೀಸ್​ ಗಳಿಕೆಯಲ್ಲಿ ಹೊಸ ದಾಖಲೆ ಮಾಡುವ ಸಾಧ್ಯತೆ ಇದೆ. ಸದ್ಯ, ಸಿನಿಮಾದ ಪೋಸ್ಟ್ ಪ್ರೊಡಕ್ಷನ್​ ನಡೆಯುತ್ತಿದೆ.

LEAVE A REPLY

Please enter your comment!
Please enter your name here