ಕೆಜಿಎಫ್ ಚಾಪ್ಟರ್ 2: ಅನಂತ್‌ನಾಗ್ ಬದಲಿಗೆ ಪ್ರಕಾಶ್ ರಾಜ್? ಏನಂತಾರೆ ನಿರ್ದೇಶಕರು?

0
135

ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಮತ್ತೆ ಸುದ್ದಿಯಲ್ಲಿದೆ. ಪಾತ್ರವರ್ಗಕ್ಕೆ ಪ್ರಕಾಶ್ ರಾಜ್ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ನಟ ಇಂದು ತಮ್ಮ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಈ ಕುರಿತು ಹೇಳಿದ್ದಾರೆ. “ಸ್ಟಾರ್ಟ್ ಕ್ಯಾಮೆರಾ .. ಆಕ್ಷನ್ … ಬ್ಯಾಕ್ ಟು ವರ್ಕ್..” ಎಂದು ಬರೆದಿದ್ದಾರೆ.

ಅವರು ಹಂಚಿಕೊಂಡಿರುವ ಫೋಟೋದಲ್ಲಿ ಕಾಣುವ ಸೆಟ್ಟಿಂಗ್ ಕೆಜಿಎಫ್ ಚಾಪ್ಟರ್ 1 ರಲ್ಲಿನ ಮಾಳವಿಕಾ ಅವಿನಾಶ್ ಪಾತ್ರದ ಕಚೇರಿಯನ್ನು ಹೋಲುತ್ತದೆ. ಅದರಲ್ಲಿ ಅನಂತ್ ನಾಗ್ ನಿಭಾಯಿಸಿದ ಪಾತ್ರದಲ್ಲಿ ಪ್ರಕಾಶ್ ರಾಜ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಹರಿದಾಡುತ್ತಿದೆ. ಈ ಎಲ್ಲಾ ಊಹಾಪೋಹಗಳಿಗೆ ನಿರ್ದೇಶಕ ಪ್ರಶಾಂತ್ ನೀಲ್ ತೀಲಾಂಜಲಿ ಹಾಡಿದ್ದಾರೆ. ಅವರು ಹೇಳುವಂತೆ “ಪ್ರಕಾಶ್ ರಾಜ್ ಖಂಡಿತವಾಗಿಯೂ ಅನಂತ್ ನಾಗ್ ಬದಲಿಯಾಗಿ ಬಂದಿಲ್ಲ. ಸಿನಿಮಾದಲ್ಲಿ ಅವರದ್ದು ಹೊಸ ಪಾತ್ರ” ಎಂದು ಹೇಳಿದ್ದಾರೆ.

ಇದನ್ನೂ ನೋಡಿ : #Boycott_KGF_chapter_2 – ಏನಿದು ಹೊಸ ಟ್ರೆಂಡ್?

ಯಶ್ ನಾಯಕನಾಗಿ ನಟಿಸಿರುವ ಚಿತ್ರದ ಶೂಟಿಂಗ್ ಆ.26 ರಂದು ಪುನರಾರಂಭಗೊಂಡಿದ್ದು, ತಂಡವು 25 ದಿನಗಳ ವೇಳಾಪಟ್ಟಿಯನ್ನು ಮಾಡಿಕೊಂಡಿದೆ. ಚಿತ್ರೀಕರಣದ ಮೊದಲ ಹತ್ತು ದಿನಗಳ ಶೂಟಿಂಗ್‌ನಲ್ಲಿ ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್, ಮತ್ತು ನಾಗಭರಣ ಮತ್ತಿತರರು ಭಾಗವಹಿಸಲಿದ್ದಾರೆ. ಇದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಕೆಲ ದಿನಗಳ ಬಳಿಕ, ಯಶ್ ಸೆಟ್‌ಗೆ ಸೇರುವ ನಿರೀಕ್ಷೆಯಿದೆ. ಬಾಲಿವುಡ್ ನಟರಾದ ಸಂಜಯ್ ದತ್ ಮತ್ತು ರವೀನಾ ಟಂಡನ್ ನಟಿಸಿರುವ ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here