ಮತ್ತೆ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣಲಿದೆ ಕೆಜಿಎಫ್ – ಚಾಪ್ಟರ್ 1, ಟಗರು, ಲವ್ ಮೋಕ್ಟೈಲ್ ಸಿನಿಮಾ!

0
184
Tap to know MORE!

ಕೊರೊನಾ ಅನ್‌ಲಾಕ್‌ ಪ್ರಕ್ರಿಯೆಯಲ್ಲಿ ಥಿಯೇಟರ್‌ಗಳು, ಮಲ್ಟಿಫ್ಲೆಕ್ಸ್‌ಗಳನ್ನು ಮತ್ತೆ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ, ಕೊರೊನಾ ಸೋಂಕು ಇನ್ನೂ ತನ್ನ ಆಕ್ರಮಣವನ್ನು ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ಈಗಷ್ಟೇ ತೆರೆದಿರುವ ಚಿತ್ರಮಂದಿರಗಳಿಗೆ ಸಿನಿ ಪ್ರೇಕ್ಷಕರು, ಅಭಿಮಾನಗಳು ಎಷ್ಟರ ಸಂಖ್ಯೆಯಲ್ಲಿ ಬರಬಹುದು, ಸಿನಿಮಾಗಳು ಹೆಚ್ಚು ಗಳಿಕೆ ಕಾಣಲು ಸಾಧ್ಯವೇ ಎಂಬ ಗೊಂದಲ ಹೊಸ ಸಿನಿಮಾ ಮಾಡಿರುವ ಚಿತ್ರದಂಡಗಳಿಗೆ ಎದುರಾಗಿದೆ. ಹಾಗಾಗಿ ಹೊಸ ಸಿನಿಮಾಗಳನ್ನು ಈಗಲೇ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಹಾಗಾಗಿ, ಲಾಕ್‌ಡೌನ್‌ಗೂ ಮುಂಚೆಯೇ ತೆರೆಕಂಡಿದ್ದ ಹಲವಾರು ಸಿನಿಮಾಗಳನ್ನು ಮತ್ತೆ ಚಿತ್ರಮಂದಿರಗಳಲ್ಲಿ ರಿಲೀಸ್‌ ಮಾಡಲು ಸ್ಯಾಂಡಲ್‌ವುಡ್‌ ಸಿದ್ದತೆ ನಡೆಸಿದೆ. ಕೆಜಿಎಫ್, ಟಗರು, ಲವ್ ಮಾಕ್ಟೇಲ್ ಸೇರಿದಂತೆ ಹಲವಾರು ಚಿತ್ರಗಳು ಮರುಬಿಡುಗಡೆಗೊಳ್ಳಲಿದೆ.

‌‘ಕೆಜಿಎಫ್‌ ಚಾಪ್ಟರ್‌ -2’ ಬಿಡುಗಡೆಯ ಸುದ್ದಿ ಜೋರಾಗಿರುವ ನಡುವೆಯೇ ಚಿತ್ರದ ಮೊದಲ ಭಾಗ “ಕೆಜಿಎಫ್ ಚಾಪ್ಟರ್ 1”  ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡಲಾಗುತ್ತಿದೆ. ಅ. 23ರಿಂದಲೇ ಕೆಲವೆಡೆ ಮರುಬಿಡುಗಡೆ ಮಾಡಲಾಗಿದೆ. ಅ. 29ರವರೆಗೆ ಪ್ರದರ್ಶನ ನಡೆಯಲಿದೆ ಎಂದು ಚಿತ್ರ ತಂಡದ ಹಲವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಮಾಸ್ಕ್‌, ಸಾಮಾಜಿಕ ಅಂತರದ ಜತೆಗೆ ಜವಾಬ್ದಾರಿಯುತವಾಗಿ ಸಿನಿಮಾವನ್ನು ಆನಂದಿಸಿರಿ. ಕೆಜಿಎಪ್‌ -1 ನಿಮ್ಮ ಸಮೀಪದ ಚಿತ್ರಮಂದಿರಗಳಲ್ಲಿ ಅ. 23ರಿಂದ 29ರವರೆಗೆ ಮರುಬಿಡುಗಡೆ ಆಗುತ್ತಿದೆ’ ಎಂದು ಎಂದು ಫರ್ಹಾನ್‌ ಅಖ್ತರ್‌ ಅವರು ಬರೆದುಕೊಂಡಿದ್ದಾರೆ.

ಚಿರಂಜೀವಿ ಸರ್ಜಾ ಅಭಿನಯದ ಕಡೆಯ ಚಿತ್ರ ಎನಿಸಿಕೊಂಡಿರುವ ಶಿವಾರ್ಜುನ ಸಿನಿಮಾ ರಿಲೀಸ್‌ ಅದ ಒಂದೇ ವಾರಕ್ಕೆ ಲಾಕ್‌ಡೌನ್‌ ಮಾಡಲಾಗಿದ್ದರಿಂದಾಗಿ ಸಿನಿಮಾ ಪ್ರದರ್ಶನ ಮೊಟಕುಗೊಂಡಿತ್ತು. ಉತ್ತಮ ಪ್ರದರ್ಶನ ನೀಡುತ್ತಿದ್ದ ಕಾರಣದಿಂದಾಗಿ ಹಾಗೂ ಜಿರು ಅಭಿಮಾನಿಗಳು ಮತ್ತೆ ತಮ್ಮ ಸ್ಟಾರ್‌ ನಟನನ್ನು ತೆರೆಯ ಮೇಲೆ ನೋಡುವ ಅವಕಾಶ ನೀಡಲು ಶಿವಾರ್ಜುನ ಸಿನಿಮಾ ಮತ್ತೆ ತೆರೆಕಾಣುತ್ತಿದೆ. ಇನ್ನು ಕನ್ನಡ ಲವ್‌ ಸಿನಿಮಾಗಳಲ್ಲಿ ಹೊಸ ರೀತಿಯ ಪ್ರೀತಿ ಹುರುಪು ನೀಡಿ, ಲವ್‌ ಬರ್ಡ್ಸ್‌ಗಳಿಗೆ ಮುದ ನೀಡಿದ್ದ ಲವ್‌ ಮೊಕ್ಟೈಲ್‌ ಸಿನಿಮಾ ಕೂಡ ರಿಲೀಸ್‌ ಆಗಿದೆ.

LEAVE A REPLY

Please enter your comment!
Please enter your name here