ಕೆಜಿಎಫ್ ಪ್ರಚಾರ : ಚಿತ್ರತಂಡದಿಂದ ಬಿಡುಗಡೆ ಆಯ್ತು “ಕೆಜಿಎಫ್ ಟೈಮ್ಸ್” ಪತ್ರಿಕೆ

0
186
Tap to know MORE!

ಬೆಂಗಳೂರು: ಕೆಜಿಎಫ್​ ಚಾಪ್ಟರ್ 2 ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಈಗಾಗಲೇ ಚಿತ್ರದ ಮೊದಲ ಭಾಗಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಎರಡನೇ ಭಾಗದ ಮೇಲೆ ಇಡೀ ದೇಶದ ಚಿತ್ರಪ್ರೇಮಿಗಳ ಕಣ್ಣಿದೆ. ಚಿತ್ರತಂಡವು ವಿಶೇಷ ಪ್ರಚಾರದಲ್ಲಿ ನಿರತವಾಗಿದೆ.

ಯಶ್ ಜನ್ಮದಿನದ ನಿಮಿತ್ತ ಹೊಂಬಾಳೆ ಫಿಲಂಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಅದಕ್ಕಾಗಿಯೇ ಒಂದಷ್ಟು ಪ್ರಚಾರವನ್ನೂ ತಂಡ ಮಾಡಿಕೊಳ್ಳುತ್ತಿದೆ. ಇದೀಗ ಸದ್ದಿಲ್ಲದೆ ಸುದ್ದಿ ಪತ್ರಿಕೆಯನ್ನೇ ಹೊರತಂದಿದೆ ಚಿತ್ರತಂಡ.

ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ: ಭಾರತದಿಂದ ಮಲಯಾಳಂ ಚಿತ್ರ “ಜಲ್ಲಿಕಟ್ಟು” ನಾಮನಿರ್ದೇಶನ

ಕೆಜಿಎಫ್ ಟೈಮ್ಸ್ ಹೆಸರಿನ ಪತ್ರಿಕೆಯೊಂದನ್ನು ಪ್ರಚಾರಕ್ಕೋಸ್ಕರ ಬಳಸಿಕೊಳ್ಳಲಾಗಿದೆ. ಆ ಪತ್ರಿಕೆಯಲ್ಲಿ ಬಾಲಕ ರಾಕಿ, ರಾಕಿ ಭಾಯ್ ಆಗಿ ಬೆಳೆದ ರೀತಿಯನ್ನು ವಿವರಿಸಿದ್ದಾರೆ. ಕೆಜಿಎಫ್​ ಮೊದಲ ಭಾಗದ ಒಂದಷ್ಟು ಫೋಟೋಗಳನ್ನು ಅದರಲ್ಲಿ ಪ್ರಕಟಿಸಿ ಸುದ್ದಿ ರೂಪದಲ್ಲಿ ಅಭಿಮಾನಿಗಳಿಗೆ ನೀಡಿದ್ದಾರೆ. ಎರಡನೇ ಭಾಗದಲ್ಲಿ ಏನಾಗಬಹುದು ಎಂಬುದರ ಬಗ್ಗೆಯೂ ಸುಳಿವು ನೀಡಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಒಟ್ಟಿನಲ್ಲಿ ಕೆಜಿಎಫ್​ ಸಿನಿಮಾ ಪ್ರಚಾರ ಕೆಲಸ ಆರಂಭಿಸಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳ ಪಾಲಿಗೆ ಇದು ಹಬ್ಬದಂತೆ ಭಾಸವಾಗಿದೆ. ಇನ್ನೇನು ಶೀಘ್ರದಲ್ಲಿ ಸಿನಿಮಾ ಬಿಡುಗಡೆ ಬಗ್ಗೆಯೂ ಚಿತ್ರತಂಡ ಘೋಷಣೆ ಮಾಡಲಿದೆ ಎಂದು ಕಾಯುತ್ತಿದ್ದಾರೆ.

ದೇಶದ ಮೊಟ್ಟಮೊದಲ ಚಾಲಕ ರಹಿತ ಮೆಟ್ರೋ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

LEAVE A REPLY

Please enter your comment!
Please enter your name here