BIG NEWS : ಒಂದು ದಿನ ಮುಂಚೆಯೇ ಬಿಡುಗಡೆಯಾಯ್ತು ಕೆಜಿಎಫ್ ಚಾಪ್ಟರ್ 2 ಟೀಸರ್!

0
79

ಕೆಜಿಎಫ್ ಚಾಪ್ಟರ್ 2 ಚಿತ್ರದ ಬಹುನಿರೀಕ್ಷಿತ ಟೀಸರ್ ಬುಧವಾರ ಬಿಡುಗಡೆಗೊಂಡಿದೆ. ಕಳೆದ ವಾರ, ಗುರುವಾರ ಜ.8 ರಂದು ಟೀಸರ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ಚಿತ್ರತಂಡ, ಇದೀಗ ಕೆಲವು ಗಂಟೆಗಳ ಮೊದಲೇ ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡಿದೆ. ನಾಯಕ ನಟ ಯಶ್ ಅವರ 35 ನೇ ಹುಟ್ಟುಹಬ್ಬದ ಆಚರಣೆಯನ್ನು ಗುರುತಿಸುವ ಸಲುವಾಗಿ ಟೀಸರ್ ಶುಕ್ರವಾರ ಬೆಳಿಗ್ಗೆ 10: 16 ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿತ್ತು.

ಇದನ್ನೂ ಓದಿ: ಬಹುಭಾಷೆಗಳಲ್ಲಿ ತೆರೆಯ ಮೇಲೆ ಬರಲಿದೆ ಉಳ್ಳಾಲದ “ರಾಣಿ ಅಬ್ಬಕ್ಕ” ಜೀವನಾಧಾರಿತ ಸಿನಿಮಾ!

ರಾಕಿ ಭಾಯಿ ಯಾಗಿ ಯಶ್, ತನ್ನ ಶತ್ರುಗಳ ವಿರುದ್ಧ ನಡೆಸುವ ದಾಳಿಯ ತೀವ್ರತೆಯನ್ನು ಹೆಚ್ಚಿಸುವ ದೃಶ್ಯವನ್ನು ಟೀಸರ್ ನಮಗೆ ನೀಡುತ್ತದೆ. ಸಂಜಯ್ ದತ್ ನಿರ್ವಹಿಸಿದ ಅಧೀರಾ ಪಾತ್ರದ ಒಂದು ನೋಟವೂ ನಮಗೆ ಸಿಗುತ್ತದೆ.

ಕೆಜಿಎಫ್ 2 ಚಿತ್ರವು ಈ ವರ್ಷದ ಬೇಸಿಗೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಕೆಜಿಎಫ್ – ಸಂಜಯ್ ದತ್ ಲುಕ್ ಗೆ ನೆಟ್ಟಿಗರು ಫಿದಾ!

LEAVE A REPLY

Please enter your comment!
Please enter your name here