ಕೆಜಿಎಫ್ – ಸಂಜಯ್ ದತ್ ಲುಕ್ ಗೆ ನೆಟ್ಟಿಗರು ಫಿದಾ!

0
237
Tap to know MORE!

ಸಂಜಯ್ ದತ್ ರವರ ಹುಟ್ಟುಹಬ್ಬದಂದು ಕನ್ನಡ ಚಲನಚಿತ್ರದ ಕೆಜಿಎಫ್: ಚಾಪ್ಟರ್ 2 ರ ನಿರ್ಮಾಪಕರು, ಚಿತ್ರದ ಅವರ ಒಂದು ಲುಕ್ ಅನ್ನು ಅನಾವರಣಗೊಳಿಸಿದರು. ಮೊದಲೇ ವರದಿ ಮಾಡಿದಂತೆ, ಚಿತ್ರದಲ್ಲಿ ಅವರು ಅಧೀರಾ ಎಂಬ ಖಳನಾಯಕನ ಪಾತ್ರವನ್ನು ಮಾಡಲಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ಪ್ರಕಾರ, ಚಿತ್ರದಲ್ಲಿನ ಸಂಜಯ್ ದತ್ ಪಾತ್ರ ಮತ್ತು ನೋಟವು ವೈಕಿಂಗ್ಸ್‌ನಿಂದ ಪ್ರೇರಿತವಾಗಿದೆ. ಪೋಸ್ಟರ್ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ, ಇದು ಸಾವಿರಾರು ಷೇರುಗಳು ಮತ್ತು ಕಾಮೆಂಟ್‌ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಯಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಕೆಜಿಎಫ್‌ನ ಎರಡನೇ ಭಾಗದಲ್ಲಿ ಸಂಜಯ್ ದತ್ ಮುಖ್ಯ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಪೋಸ್ಟರ್ ಅನ್ನು ಟ್ವಿಟರ್‌ನಲ್ಲಿ ಹಂಚಿ, ಸಂಜಯ್ ದತ್ ಅವರ 61 ನೇ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಅಧೀರ ಪಾತ್ರದ ಪೋಸ್ಟರ್ ಇಲ್ಲಿದೆ

ಇದರ ಕುರಿತು ಸಂಜಯ್ ದತ್ ರವರೇ ಖುದ್ದಾಗಿ ಟ್ವೀಟ್ ಮಾಡಿದ್ದು, ಈ ಚಿತ್ರದಲ್ಲಿ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ ಮತ್ತು ಇದಕ್ಕಿಂತಲೂ ಉತ್ತಮ ಹುಟ್ಟುಹಬ್ಬದ ಉಡುಗೊರೆಯನ್ನು ನಾನು ಕೇಳಲಾರೆ. ಸಂಪೂರ್ಣ ತಂಡಕ್ಕೆ ಧನ್ಯವಾದಗಳು. 

LEAVE A REPLY

Please enter your comment!
Please enter your name here