ಕೆಜಿಎಫ್ ಚಾಪ್ಟರ್ 2 : ಅನಂತ್ ನಾಗ್ ಬದಲಿಗೆ ಪ್ರಕಾಶ್ ರಾಜ್ ?

0
176
Tap to know MORE!

ಕೆಜಿಎಫ್ ಚಾಪ್ಟರ್ 2 ರ ತಂಡವು ಅಧಿಕೃತವಾಗಿ ತಮ್ಮ ಶೂಟಿಂಗ್ ಅನ್ನು ಪುನರಾರಂಭಿಸಿದೆ . 2018 ರಲ್ಲಿ ತೆರೆಗೆ ಬಂದ ಮೂಲ ಚಿತ್ರ ಕೆಜೆಎಫ್: ಚಾಪ್ಟರ್ 1 ಬಾಕ್ಸ್ ಆಫೀಸ್ ನಲ್ಲಿ ಭಾರಿ ಯಶಸ್ಸನ್ನು ಗಳಿಸಿದ್ದು, ಅಂದಿನಿಂದ ಇಂದಿನವರೆಗೂ ಅದರ ಮುಂದಿನ ಭಾಗಕ್ಕಾಗಿ ಅಭಿಮಾನಿಗಳು ತಾಳ್ಮೆಯಿಂದ ಕಾಯುತ್ತಿದ್ದಾರೆ.

ಈ ನಡುವೆ ಚಾಪ್ಟರ್ 2 ನಲ್ಲಿ ಚಿತ್ರ ತಂಡವು ಹೊಸ ಪಾತ್ರಗಳಿಗೆ ಕೆಲವು ಸ್ಟಾರ್ ನಟರನ್ನು ಸೇರಿಸಿರುವುದರಿಂದ ಚಿತ್ರವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಳ್ಳುವ ಭರವಸೆ ನೀಡುತ್ತಿದೆ. ಅಧೀರನಾಗಿ ಸಂಜಯ್ ದತ್ ಮತ್ತು ಮುಖ್ಯ ಪಾತ್ರದಲ್ಲಿ ರವೀನಾ ಟಂಡನ್ ಇದ್ದಾರೆ ಎಂದು ನಮಗೆ ತಿಳಿದಿದೆ. ಇದೀಗ ಪ್ರಕಾಶ್ ರಾಜ್ ಹೊಸ ಸೇರ್ಪಡೆ ಆಗಿದ್ದು, ಅಭಿಮಾನಿಗಳ ಕೌತುಕವನ್ನು ಇನ್ನಷ್ಟು ಹೆಚ್ಚಿಸಿದೆ.

ಅನಂತ್ ನಾಗ್ ಲುಕ್‌ನಲ್ಲಿ ಕಾಣಿಸಿರುವ ಪ್ರಕಾಶ್ ರಾಜ್ ಅನಂತ್ ನಾಗ್  ನಿಭಾಯಿಸಿದ ಪಾತ್ರವನ್ನು ಇವರು ನಿಭಾಯಿಸಲಿದ್ದಾರಾ ಎಂಬ ಸಂಶಯವನ್ನು ಅಭಿಮಾನಿಗಳು ಹೊರ ಹಾಕುತ್ತಿದ್ದಾರೆ. ಇವೆಲ್ಲದಕ್ಕೂ ನಿರ್ದೇಶಕರೇ ಉತ್ತರಿಸಬೇಕು!

ಇದನ್ನೂ ನೋಡಿ : ಕೆಜಿಎಫ್ ಚಾಪ್ಟರ್ 2:  ಅಧೀರನಾಗಿ ಸಂಜಯ್ ದತ್

ನಿರ್ದೇಶಕ ಪ್ರಶಾಂತ್ ನೀಲ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಚಾಪ್ಟರ್ 2 ಶೂಟಿಂಗ್ ಪುನರಾರಂಭಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನೀಲ್ ಅವರು ಪ್ರಕಾಶ್ ರಾಜ್ ಅವರೊಂದಿಗಿನ ತೆರೆಯ ಹಿಂದಿನ ಚಿತ್ರಗಳನ್ನು ಹಂಚಿಕೊಂಡರು.

ಇದನ್ನು ಮೊದಲು ಅಕ್ಟೋಬರ್ 23 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ, ಪ್ರಸ್ತುತ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು, ಆ ದಿನಾಂಕವನ್ನು ಉಳಿಸಿಕೊಳ್ಳುವ ಸಾಧ್ಯತೆಗಳು ಬಹಳ ಕಡಿಮೆ!

LEAVE A REPLY

Please enter your comment!
Please enter your name here